", "articleSection": "Greetings", "image": { "@type": "ImageObject", "url": "https://prod.cdn.publicnext.com/s3fs-public/418299-1736440172-GUNAVANTA.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಟ್ಟುಹಬ್ಬ ಬಂತಂದ್ರೆ ಸಾಕು... ಅದೆಷ್ಟೋ ಉದ್ಯಮಿಗಳು ದುಂದುವೆಚ್ಚದಲ್ಲಿ ಪಾರ್ಟಿ ಮಾಡುವುದು ಸಹಜ. ಆದ್ರೆ, ಇಲ್ಲೊಬ್ಬರು ಉದ್ಯಮಿ ತ...Read more" } ", "keywords": ",Hubballi-Dharwad,Greetings", "url": "https://publicnext.com/node" }
ಹುಬ್ಬಳ್ಳಿ: ಹುಟ್ಟುಹಬ್ಬ ಬಂತಂದ್ರೆ ಸಾಕು... ಅದೆಷ್ಟೋ ಉದ್ಯಮಿಗಳು ದುಂದುವೆಚ್ಚದಲ್ಲಿ ಪಾರ್ಟಿ ಮಾಡುವುದು ಸಹಜ. ಆದ್ರೆ, ಇಲ್ಲೊಬ್ಬರು ಉದ್ಯಮಿ ತಮ್ಮ ಜನ್ಮದಿನದಂದು ವಿಕಲಚೇತನ ಮಕ್ಕಳು, ಅಂಧ ಮಕ್ಕಳು, ಅಷ್ಟೇ ಅಲ್ದೆ ಬೃಹತ್ ರಕ್ತದಾನ ಶಿಬಿರವನ್ನೂ ಹಮ್ಮಿಕೊಂಡಿದ್ದು, ಡಾ.ಪ್ರಸಾದ್ ಕೂಡ ರಕ್ತದಾನ ಮಾಡುವುದರ ಮೂಲಕ ಸಮಾಜದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಎಸ್.... ಇಂದು ಸ್ವರ್ಣ ಗ್ರೂಪ್ ಆಫ್ ಕಂಪನಿ ಮಾಲೀಕರಾದ ಡಾ. ಸಿಎಚ್ ವಿಎಸ್‌ವಿ ಪ್ರಸಾದ್ ಅವರ ಹುಟ್ಟುಹಬ್ಬ. ಇಂದಿನ ದಿನ ಅವರು ಮಾಡಿದ ಕಾರ್ಯ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಬೆಳಗ್ಗೆ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ನವೀನ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಸಹಿತ ಪೂಜೆ ಮಾಡಿದರು. ಡಾ.ವಿಎಸ್‌ವಿ ಪ್ರಸಾದ್ ಅವರ ಸ್ನೇಹ ಬಳಗ ಮತ್ತು ಗಣ್ಯರು ಕೇಕ್ ಕಟ್ ಮಾಡಿಸಿ ಭಗವದ್ಗೀತೆ ಪುಸ್ತಕ ನೀಡುವುದರ ಮೂಲಕ ಶುಭ ಕೋರಿದರು. ಇದಾದ ನಂತರ ಗದಗ ರಸ್ತೆಯಲ್ಲಿರುವ ಶ್ರೀ ಬಾಲಾಜಿ ಮಂದಿರದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅದೇ ರೀತಿ ಸದ್ಗುರು ಶ್ರೀ ಸಿದ್ದಾರೂಢರ ಮಠಕ್ಕೆ ಭೆಟಿ ನೀಡಿ ಸಿದ್ದಾರೂಢರ ಅಜ್ಜರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ವಿಶ್ವ ಹಿಂದೂ ಪರಿಷತ್ ಸಂಚಾರಿತ ಗೋ ಶಾಲೆಗೆ ಮತ್ತು ಶ್ರೀ ಸಾಯಿ ಗೋ ಶಾಲೆಗೆ ತೆರಳಿ ಹಸುಗಳಿಗೆ ಮೇವು ಹಾಕಿ ಪ್ರಾಣಿಗಳ ಜೊತೆ ತಮ್ಮ ಪ್ರೀತಿಯನ್ನು ಮೆರೆದರು.
ಇನ್ನೂ ವಿಶೇಷ ಅಂದ್ರೆ ಡಾ.ವಿಎಸ್‌ವಿ ಪ್ರಸಾದ್ ತಮ್ಮ ಹುಟ್ಟುಹಬ್ಬಕ್ಕೆ, ಪ್ರತಿವರ್ಷದಂತೆ "ದಯೆಯೇ ಧರ್ಮದ ಮೂಲವಯ್ಯ" ಎಂಬ ಬಸವಣ್ಣನವರ ಮಾತಿನಂತೆ, ಹುಬ್ಬಳ್ಳಿಯ ಆನಂದನಗರದಲ್ಲಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯ ಮಕ್ಕಳ ಜೊತೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಮಕ್ಕಳಿಗೆ ಊಟದ ವ್ಯವಸ್ಥೆ ಕೂಡ ಮಾಡಿದರು. ಅಂಧ ಮುದ್ದುಮಕ್ಕಳ ಬಾಯಲ್ಲಿ ಜನ್ಮ ದಿನದ ಶುಭಾಶಯ ಕೇಳಿದ ಡಾ. ಪ್ರಸಾದ್ ಭಾವುಕರಾದರು. ಆ ಮಕ್ಕಳಿಗೆ ಚೆನ್ನಾಗಿ ಓದಿ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಅದೇ ರೀತಿ ವಿಎಸ್‌ವಿ ಪ್ರಸಾದ್ ಅವರ ಹುಟ್ಟುಹಬ್ಬದ ಅಂಗವಾಗಿ, ಜೈ ಭೀಮ್ ಸಂಘದಿಂದ ಹುಬ್ಬಳ್ಳಿಯ ಗಬ್ಬೂರಲ್ಲಿರುವ ವಿಕಲಚೇತನರ ಪ್ರೌಢಶಾಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ ಮಕ್ಕಳಿಗೆ ಊಟ ಬಡಿಸಿ ಅವರ ಜೊತೆಗೇ ಊಟ ಮಾಡಿ, ಉಡುಗೊರೆ ನೀಡಿದರು. ಕುಟುಂಬ ಸಮೇತ ಮತ್ತು ತಮ್ಮ ಸಿಬ್ಬಂದಿ ಜೊತೆ ಕೂಡಿಕೊಂಡು ಕೆಲ ಹೊತ್ತು ಆ ಮಕ್ಕಳೊಂದಿಗೆ ಕಾಲ ಕಳೆದು ಅವರ ಕಷ್ಟಕ್ಕೆ ಸ್ಪಂದಿಸಿದರು.
ಇನ್ನು ಅತೀ ಮುಖ್ಯವಾಗಿ ರಕ್ತದಾನ ಮಹಾದಾನ ಅಂತಾರೆ. ಅದೆ ರೀತಿ ವಿಎಸ್‌ವಿ ಪ್ರಸಾದ ಅವರು ಇಲ್ಲಿಯವರೆಗೆ 90 ಬಾರಿ ರಕ್ತದಾನ ಮಾಡಿದ್ದಾರೆ. ಇಂದು ಅವರ ಜನ್ಮ ದಿನದ ಅಂಗವಾಗಿ, ರೈಲ್ವೆ ಸ್ಟೇಶನ್ ಹತ್ತಿರವಿರುವ ಸ್ವರ್ಣ ಪ್ಯಾರಡೈಸ್ ಅವರ ಕಚೇರಿಯಲ್ಲಿ ಭಗತ್ ಸಿಂಗ್ ಸೇವಾ ಸಂಘದಿಂದ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾಗ,
ವಿಎಸ್‌ವಿ ಪ್ರಸಾದ್ ಅವರು ದಂಪತಿ ಸಮೇತ ಕೂಡ ರಕ್ತದಾನ ಮಾಡಿದರು. ರಾಷ್ಟ್ರೋತ್ಥಾನ ರಕ್ತಕೇಂದ್ರ, ಇನ್‌ಫೋಸಿಸ್ ಫೌಂಡೇಶನ್, ದಿವಾ ಫೌಂಡೇಶನ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ನೂರಾರು ಜನರು ರಕ್ತದಾನ ಮಾಡಿದರು. ಅಲ್ಲದೆ, ಅವರ ಕಚೇರಿಗೆ ಹಲವಾರು ಗಣ್ಯರು ಬಂದು ಕೇಕ್ ಕಟ್ ಮಾಡಿಸುವ ಮೂಲಕ ಜನ್ಮದಿನಕ್ಕೆ ಶುಭ ಕೋರಿದರು.
ಒಟ್ಟಿನಲ್ಲಿ ಉದ್ಯಮದ ಜೊತೆಗೆ ಸಮಾಜ ಸೇವೆ ಮಾಡುತ್ತಿರುವ ಡಾ.ವಿಎಸ್ ವಿ ಪ್ರಸಾದ್ ಅವರ ಸೇವೆ ನಿರಂತರವಾಗಿರಲಿ ಹಾಗೂ ದೇವರು ಅವರಿಗೆ ಆಯುಷ್ಯ- ಆರೋಗ್ಯ ನೀಡಿ ಕಾಪಾಡಲಿ ಎಂಬುದೇ ಹುಬ್ಬಳ್ಳಿ ಜನರ ಅಭಿಲಾಷೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/01/2025 09:59 pm