ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಉದ್ಯಮಿ ಅಪಹರಣ - ಮುಂದುವರೆದ ತನಿಖೆ, ಎಸ್ಪಿ ಸ್ಪಷ್ಠನೆ

ಕಾರವಾರ: ಮುಂಡಗೋಡ ನಿವಾಸಿ ಜಮೀರ್ ಅಹಮದ್ ದರ್ಗಾವಾಲೆ ಪ್ರಕರಣ ಮೆಲ್ನೋಟಕ್ಕೆ ಹಣಕ್ಕಾಗಿ ಅಪಹರಣ ಮಾಡಿರುವುದು ಕಂಡು ಬಂದಿದೆ.‌ ಅಪಹರಣ ಮಾಡಿದವರ ಹುಡುಕಾಟ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ತಿಳಿಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಗುರುವಾರ ರಾತ್ರಿ ಬೈಕ್ ನಲ್ಲಿ ಹೊಗುತ್ತಿರುವಾಗ ಹಿಂದಿನಿಂದ ಕಾರಿನಿಂದ ಗುದ್ದಿದ್ದಾರೆ.‌ ಕಾರು ಗುದ್ದುತ್ತಿದ್ದಂತೆ ಬೈಕ್ ಸವಾರ ಜಮೀರ್ ದರ್ಗಾವಾಲೆ ಬೈಕಿನಿಂದ ಕೆಳಕ್ಕೆ ಬಿದಿದ್ದಾನೆ. ಕೂಡಲೆ ಜಮೀರ್ ಹಾಗೂ ಆತನ ಜೊತೆ ಇದ್ದವನ ಮೇಲೆ ಹಲ್ಲೆ ಮಾಡಿದ್ದಾರೆ.‌

ಹಲ್ಲೆ ಮಾಡಿ ಜಮೀರ್ ದರ್ಗಾವಾಲೆ ಎಂಬಾತನನ್ನ ಕಾರಿನಲ್ಲಿ ಹಾಕಿ ಒಯ್ಯಲಾಗಿತ್ತು. ಪ್ರಕರಣ ದಾಖಲಿಸಿ ಮುಂಡಗೋಡ ಪೊಲೀಸ್ ತಂಡ ಎಚ್ಚೆತ್ಕೊಂಡು ಕಾರ್ಯೋನ್ಮೂಖ ಆಗಿತ್ತು. ಅಪಹರಣ ಮಾಡಿದವರು ಜಮೀರ್ ಕುಟುಂಬಸ್ಥರಿಗೆ ಕರೆ ಮಾಡಿ 35 ಲಕ್ಷ ರೂಪಾಯಿ ಡಿಮ್ಯಾಂಡ್ ಕೂಡ ಮಾಡಿದ್ದು, ಹಣ ಕೊಡದಿದ್ದರೆ ಜಮೀರ್ ಅವರನ್ನು ಸಾಯಿಸುವುದಾಗಿ ಬೆದರಿಸಿದ್ದರು. ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಹಾವೇರಿ ಬಳಿಯ ಟೋಲ್ ಗೇಟ್ ನಲ್ಲಿ ಜಮೀರ್ ಅವರನ್ನು ಅಪಹರಣಕಾರರು ಬಿಟ್ಟು ಹೋಗಿದ್ದಾರೆ‌. ಅವರ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯ ಮಾಡಿದ್ದಾರೆ.‌ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಗೊತ್ತಾಗ ಬೇಕಿದೆ ಎಂದರು.

Edited By : PublicNext Desk
Kshetra Samachara

Kshetra Samachara

10/01/2025 04:22 pm

Cinque Terre

16.36 K

Cinque Terre

0