ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನಲ್ಲಿ ನಡೆಸಿದ ಪೂಜೆ ಶತ್ರು ನಾಶ ಪೂಜೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಧಿಕಾರ ಬೇಕು ಅಂತ ಅಲ್ಲಿ ಎಲ್ಲೋ ಶತ್ರು ನಾಶಕ್ಕೆ ಹೋಗೋದು , ಅಲ್ಲೂ ಕೂಡಾ ದೇವರನ್ನ ಕೇಳೋದು ಅಧಿಕಾರ ಕೊಡಪ್ಪ, ಶತ್ರು ನಾಶ ಮಾಡು ಅಂತಾನೆ.
ಇವತ್ತು ವೈಕುಂಠ ಏಕಾದಶಿ ವೈಕುಂಠ ಬಾಗಿಲು ತೆಗೆಯುತ್ತೆ ಅಂತ ಪ್ರತೀತಿ ಇದೆ. ಲಕ್ಷಾಂತರ ಜನ ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಳೆದು ಮಾಡಲಿ ಅಂತ, ಮುಕ್ತಿ ಕೊಡಪ್ಪ ಅಂತ ಕೇಳ್ತಾರೆ ಎಂದರು.
PublicNext
10/01/2025 01:36 pm