ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಪಾರ್ಟಿಯಲ್ಲಿ ಈಗ ಜೋರಾಗಿ ಸದ್ದು ಮಾಡ್ತಿದ್ದೆ ಡಿನ್ನರ್ ಪಾಲಿಟಿಕ್ಸ್ , ಈ ಡಿನ್ನರ್ ಪಾಲಿಟಿಕ್ಸ್‌ನಿಂದ ಸಚಿವ ಪ್ರಿಯಾಂಕ್ ಖರ್ಗೆ ಬಚಾವ್ ಆಗಿದ್ದಾರೆ, ಅವರು ಬಚಾವ್ ಆಗಿದ್ದು, ಇಲ್ಲಿದೆ ಒಂದು ಒಂದು ವಿಶೇಷ ವರದಿ.
ರಾಜ್ಯ ಕಾಂಗ್ರೆಸ್‌ನಲ್ಲಿ ಕೆಲ ನಾಯಕರು ಪಕ್ಷದಲ್ಲಿ ತಮ್ಮ ಮುಂದಿನ ಸ್ಥಾನಕ್ಕಾಗಿ ಈಗಿನಿಂದಲೇ ತಯಾರಿ ಜೋರು ನಡೆಸಿದ್ದಾರೆ. ಅದು ತಮ್ಮ ಸಮುದಾಯವನ್ನ ಮುಂದೆ ಇಟ್ಟುಕೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿಯ ನಾಯಕರ ಡಿನ್ನರ್ ಪಾಲಿಟಿಕ್ಸ್ ಕಾಂಗ್ರೆಸ್‌ನಲ್ಲಿ ಶುರುವಾಗಿದೆ.
ಇನ್ನೊಂದು ಕಡೆ ಅದೇ ಡಿನ್ನರ್ ಪಾಲಿಟಿಕ್ಸ್‌ಗೆ ಬ್ರೇಕ್ ಹಾಕುವ ಕೆಲಸವೂ ಅಷ್ಟೇ ಜೋರಾಗಿ ಕಾಂಗ್ರೆಸ್‌ನಲ್ಲಿ ನಡೆದಿದೆ. ಹೆಚ್ಚುವರಿ ಡಿಸಿಎಂ ಸೃಷ್ಟಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ,
ಇದ್ರ ಬೆನ್ನಲ್ಲೇ ಡಿಸಿಎಂ ಡಿಕೆಶಿ ವಿದೇಶ ಪ್ರವಾಸದಲ್ಲಿರುವಾಗ್ಲೇ ಸಚಿವ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಸೇರಿದಂತೆ ಕೆಲ ಆಪ್ತ ಸಚಿವರು ಮತ್ತು ಶಾಸಕರ ಜೊತೆ ಡಿನ್ನರ್ ಮೀಟಿಂಗ್ ಮಾಡಿದ್ರು. ಈಗ ಗೃಹ ಸಚಿವ ಪರಮೇಶ್ವರ್ ಸಹ ತಮ್ಮ ಸಮುದಾಯದ ಶಾಸಕರು ಮತ್ತು ಮಂತ್ರಿಗಳೊಂದಿಗೆ ಡಿನ್ನರ್ ಮೀಟಿಂಗ್ ಏರ್ಪಡಿಸಿದ್ದರು, ಆದ್ರೆ ಪರಮೇಶ್ವರ್ ಡಿನ್ನರ್ ಮೀಟಿಂಗ್‌ಗೆ ಹೈಕಮಾಂಡ್ ಬ್ರೇಕ್ ಹಾಕ್ತು. ಅದು ಡಿಕೆಶಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಯಾದ ನಂತರ ಪರಮೇಶ್ವರ್ ಡಿನ್ನರ್ ಮೀಟಿಂಗ್‌ಗೆ ಬ್ರೇಕ್ ಹಾಕಿದೆ.
ಪರಮೇಶ್ವರ್ ಡಿನ್ನರ್ ಮೀಟಿಂಗ್‌ಗೆ ಡಿಕೆಶಿಯವರೇ ಬ್ರೇಕ್ ಹಾಕಿಸಿದ್ದಾರೆ ಎಂದೆಲ್ಲ ಪಕ್ಷದಲ್ಲಿ ಗುಸುಗುಸು ಚರ್ಚೆ ಆಗ್ತಿದೆ. ಆದ್ರೆ ಇದನ್ನ ನಿರಾಕರಿಸಿರುವ ಪರಮೇಶ್ವರ್, ನಮ್ಮ ಮೀಟಿಂಗ್‌ಗೆ ಸುರ್ಜೆವಾಲ ಅವರೇ ಬರ್ತೀವಿ ಅಂದಿದ್ದಾರೆ.
ಹೀಗಾಗಿ ನಮ್ಮ ಡಿನ್ನರ್ ಮೀಟಿಂಗ್ ಮುಂದೂಡಿಕೆ ಮಾಡಿದ್ದೇವೆ ರದ್ದು ಮಾಡಿಲ್ಲ ಅನ್ನೋದು ಪರಮೇಶ್ವರ್ ಅವರ ಸಮಜಾಯಿಷಿ. ಆದ್ರೆ ಪಕ್ಷದಲ್ಲಿ ಡಿನ್ನರ್ ಮೀಟಿಂಗ್ ದೊಡ್ಡ ತಲ್ಲಣ ಸೃಷ್ಟಿಸಿದೆ ಆದ್ರೆ ಅದನ್ನ ಎಲ್ಲಿಯೂ ಹೊರಗಡೆ ಹೆಚ್ಚು ಅಸಮಾಧಾನ ತೊಡಿಸಿಕೊಳ್ಳುತ್ತಿಲ್ಲ, ಅಷ್ಟೇ ಇದೆಲ್ಲವೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಹೆಚ್ಚುವರಿ ಡಿಸಿಎಂ ಸೃಷ್ಟಿಯ ಕಾರಣಕ್ಕಾಗಿಯೇ ಡಿನ್ನರ್ ಮೀಟಿಂಗ್ ಮತ್ತು ಡಿನ್ನರ್ ಮೀಟಿಂಗ್ ರದ್ದಾಗಲು ಕಾರಣ ಎನ್ನಲಾಗಿದೆ.
ಆದ್ರೆ ಕಾಂಗ್ರೆಸ್ ನಾಯಕರ ಈ ಡಿನ್ನರ್ ಪಾಲಿಟಿಕ್ಸ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸೇಫ್ ಆದ್ರು ಎಂದು ಅವರ ಪಕ್ಷದ ಕಚೇರಿಯಲ್ಲೇ ಗುಸುಗುಸು ಮಾತು ಕೇಳಿ ಬಂದಿದೆ. ಹೌದು ಡಿನ್ನರ್ ಪಾಲಿಟಿಕ್ಸ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧದ ಹೋರಾಟಕ್ಕೆ ಬ್ರೇಕ್ ಬಿಳುತ್ತಾ..?
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ದೊಡ್ಡ ಮಟ್ಟದಲ್ಲಿ ಆಗ್ರಹಿಸಿತ್ತು. ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ನಿವಾಸಕ್ಕೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತ್ತು.
ಈ ಪ್ರಕರಣವನ್ನ ಬಿಜೆಪಿ ದೊಡ್ಡ ಮಟ್ಟದಲ್ಲಿ ತಗೆದುಕೊಂಡು ಹೋಗಲು ನಿರ್ಧಾರಿಸಿತು. ಅದರ ಮೊದಲ ಭಾಗವಾಗಿ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲಾಯಿತು. ಅಲ್ದೇ ಈ ಪ್ರಕರಣವನ್ನ ಸಿಬಿಐಗೆ ವಹಿಸಿ ಎಂದೆಲ್ಲಾ ಆಗ್ರಹಿಸಿದರು. ಆದ್ರೆ ಈಗ ಅವರ ಆಗ್ರಹ ಮರೆಯಾಗಿದೆ. ಮಾಧ್ಯಮಗಳಲ್ಲಿಯೂ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಸುದ್ದಿ ಕ್ರಮೇಣ ಕಡಿಮೆ ಆಯ್ತು, ಕಾಕತಾಳೀಯ ಎಂಬಂತೆ ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ನಲ್ಲಿ ನಡೆದ ಡಿನ್ನರ್ ಪಾಲಿಟಿಕ್ಸ್ ಎಲ್ಲರ ಚಿತ್ತ ಡಿನ್ನರ್ ಪಾಲಿಟಿಕ್ಸ್ ನತ್ತ ಹೊಯ್ತು ಆಗ ಪ್ರಿಯಾಂಕ್ ಖರ್ಗೆ ಪ್ರಕರಣ ನಿಧನವಾಗಿ ಮರೆಯಾಯ್ತು .
ಬಿಜೆಪಿ ನಾಯಕರು ಸಹ ಪ್ರಿಯಾಂಕ್ ಖರ್ಗೆ ರಾಜೀನಾಮೆ ವಿಷಯ ಮಾತನಾಡುತ್ತಿದ್ದರುವರು ಈಗ ಕಾಂಗ್ರೆಸ್‌ನ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ವ್ಯಂಗ್ಯ ಮಾತನಾಡುತ್ತಿದ್ದಾರೆ. ಮಾಧ್ಯಮಗಳು ಸಹ ಎಲ್ಲಾ ಡಿನ್ನರ್ ಪಾಲಿಟಿಕ್ಸ್ ವರದಿ ಬಗ್ಗೆ ಹೆಚ್ಚು ಕೇಂದ್ರಿಕೃತವಾಯ್ತು. ಇದರಿಂದ ಜೋರಾಗಿ ಸದ್ದು ಮಾಡುತ್ತಿದ್ದ ಪ್ರಿಯಾಂಕ್ ಖರ್ಗೆ ರಾಜೀನಾಮೆ ಒತ್ತಾಯ ಸದ್ದು ಕಡಿಮೆಯಾಯ್ತು.
ಒಟ್ಟಾರೆ ನಿಜಕ್ಕೂ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ತಲ್ಲಣ ಸೃಷ್ಟಿಸಿದೆಯೋ ಇಲ್ಬೋ ಗೊತ್ತಿಲ್ಲ, ಆದ್ರೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳು, ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದ ವರದಿಗಳು ಎಲ್ಲವೂ ಸದ್ಯಕ್ಕೆ ಡಿನ್ನರ್ ಪಾಲಿಟಿಕ್ಸ್‌ನಿಂದ ಮರೆಯಾಗಿದೆ.
ಶರತ್ ಕಪ್ಪನಹಳ್ಳಿ, ರಾಜಕೀಯ ವರದಿಗಾರ
PublicNext
10/01/2025 03:40 pm