ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಡಿನ್ನರ್ ಮೀಟಿಂಗ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ,ಸಂಪುಟ ಪುನರಚನೆ ಹೀಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ನಡುವೆ ಈಗ ಅಧಿಕಾರ ಹಂಚಿಕೆ ಬಗ್ಗೆಯೂ ಚರ್ಚೆಯಾಗುತ್ತಿದೆ.
ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ಆಗುತ್ತಾ ಯಾಕೆ ಅಂದ್ರೆ ಅಧಿಕಾರ ಹಂಚಿಕೆ ಬಗ್ಗೆ ಡಿಕೆಶಿ ಮಾತನಾಡಿದ ಬಳಿಕ ಡಿನ್ನರ್ ಮೀಟಿಂಗ್ ಗಳು ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಜಣ್ಣ ಎರಡುವರೆ ವರ್ಷ ಯಾಕೆ ,ಮುಂದೆ ಐದು ವರ್ಷ ಸಿಎಂ ಆಗ್ಲಿ ಎಂದು ಡಿಕೆಶಿಗೆ ಟಕ್ಕರ್ ಕೊಟ್ಟಿದ್ದಾರೆ.
ಮನುಷ್ಯನಿಗೆ ಆಸೆ ಅನ್ನೋದು ಸಹಜ , ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡೋದ್ರಲ್ಲಿ ತಪ್ಪೇನು ಇಲ್ಲ, ಕಳೆದ ಬಾರಿ ಚುನಾವಣೆಯನ್ನ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಮಾಡಿದ್ವಿ 138 ಸ್ಥಾನ ನಮಗೆ ಬಂತು ಹೈಕಮಾಂಡ್ ಸಿದ್ದರಾಮಯ್ಯನವರನ್ನ ಸಿಎಲ್ ಪಿ ನಾಯಕರನ್ನಾಗಿ ಮಾಡ್ತು ಮುಂದೆ ಏನಾದರೂ ಬದಲಾವಣೆ ಮಾಡಿದ್ರೆ, ಅದು ಹೈಕಮಾಂಡ್ ಗೆ ಬಿಟ್ಟದ್ದು.
ಹಾಗೇ ಮುಂದಿನ ಚುನಾವಣೆಯನ್ನ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಾಡಿ ಮತ್ತೆ ಅಧಿಕಾರಕ್ಕೆ ಬಂದ್ರೆ ಡಿಕೆ ಶಿವಕುಮಾರ್ ಅವರೇ 5 ವರ್ಷ ಮುಖ್ಯಮಂತ್ರಿಯಾಗಲಿ , ಈಗ ಎರಡುವರೆ ವರ್ಷಕ್ಕೆ ಯಾಕೆ ಹೋರಾಟ? ಯಾಕೆ ಒದ್ದಾಟ ಐದು ವರ್ಷವೇ ಆಗಲಿ ಅನ್ನೋದು ನನ್ನ ಸಲಹೆ ಎಂದರು.
PublicNext
10/01/2025 08:32 pm