ನವದೆಹಲಿ: ನಾನು ಪರಿಶ್ರಮಪಡುವುದರಲ್ಲಿ ಎಂದೆಂದೂ ಹಿಂದೆ ಬಿದ್ದಿಲ್ಲ. ಆದ್ರೆ ಎಲ್ಲರಂತೆ ನಾನು ಕೂಡ ಮನುಷ್ಯ. ನನ್ನಿಂದಲೂ ತಪ್ಪುಗಳು ಆಗುತ್ತವೆ. ಆದ್ರೆ ಉದ್ದೇಶಪೂರ್ವಕವಾಗಿ ಎಂದೂ ತಪ್ಪು ಮಾಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಝೆರೋಧಾ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ನನಗಾಗಿ ಏನನ್ನೂ ಮಾಡಿಲ್ಲ. ನನ್ನಿಂದಲೂ ತಪ್ಪುಗಳಾಗಿವೆ. ಯಾಕಂದ್ರೆ ನಾನು ದೇವರಲ್ಲ. ಮನುಷ್ಯರು ಅಂದ ಮೇಲೆ ತಪ್ಪುಗಳು ಆಗೋದು ಸಹಜ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಯುವಕರು ರಾಜಕಾರಣಕ್ಕೆ ಬರುವ ಕುರಿತು ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ರಾಜಕಾರಣಕ್ಕೆ ಬರುವ ಯುವಜನರು ಉತ್ತಮ ರಾಜಕಾರಣಿ ಆಗಬೇಕಾದರೆ ಉದಾತ್ತ ಮಹಾತ್ವಾಕಾಂಕ್ಷೆ ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ.
PublicNext
10/01/2025 10:54 pm