ಪಡುಬಿದ್ರೆ: ಸಾಲದ ಚಿಂತೆಯಲ್ಲಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿಯಲ್ಲಿ ಸಂಭವಿಸಿದೆ. ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡ ಯುವಕ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಮೂರು ತಿಂಗಳ ಹಿಂದೆ ಊರಿಗೆ ಮರಳಿದ್ದು, ಇವರಿಗೆ ಸಾಲದ ಚಿಂತೆಯಿತ್ತೆನ್ನಲಾಗಿದೆ.
ಸಾಲ ಕೊಟ್ಟ ಬ್ಯಾಂಕ್ ನವರು, ಸಾಲದವರು ಯುವಕನ ಮನೆಗೆ ಬಂದು ಹೋಗುತ್ತಿದ್ದರು., ಇದರಿಂದ ಮಾನಸಿಕವಾಗಿ ನೊಂದಿದ್ದರು. ಬೆಡ್ ರೂಂನಲ್ಲಿ ಫ್ಯಾನಿಗೆ ಚೂಡಿದಾರದ ವೇಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/01/2025 06:40 pm