ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಜನರಿಗೆ ಅಶುದ್ಧ ನೀರು ಕೊಡುತ್ತಿಲ್ಲ, ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು"- ಮೇಯರ್

ಮಂಗಳೂರು: ನಗರ ಪ್ರದೇಶದ ಶೇ. 50ರಷ್ಟು ಭಾಗಕ್ಕೆ ಸಂಸ್ಕರಿಸದ ನೀರು ಪೂರೈಸಲಾಗುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪ ಶುದ್ಧ ಸುಳ್ಳು. ಇದು ರಾಜಕೀಯ ಪ್ರೇರಿತ ಹೇಳಿಕೆ. ಇಂತಹ ಯಾವುದೇ ರೀತಿಯ ಸಂಸ್ಕರಿಸದ ನೀರನ್ನು ಮಂಗಳೂರು ಮನಪಾ ಪೂರೈಕೆ ಮಾಡುತ್ತಿಲ್ಲ ಎಂದು ಮೇಯರ್ ಮನೋಜ್ ಕುಮಾರ್ ಮಗದೊಮ್ಮೆ ಸ್ಪಷ್ಟ ಪಡಿಸಿದರು.

ಮಂಗಳೂರು ನಗರ ಪಾಲಿಕೆಯ ಬೆಂದೂರು ಶುದ್ಧೀಕರಣ ಘಟಕಕ್ಕೆ ಮೇಯರ್ ಹಾಗೂ ಮನಪಾ ಆಡಳಿತ ಪಕ್ಷದ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಮನೋಜ್, ನಾವು ಶುದ್ಧನೀರನ್ನೇ ಸರಬರಾಜು ಮಾಡುತ್ತಿದ್ದೇವೆ, ಇದೇ ಸತ್ಯ. ಆದ್ದರಿಂದ ಸತ್ಯಶೋಧನಾ ಸಮಿತಿಯ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಆಗ್ರಹವನ್ನು ತಳ್ಳಿ ಹಾಕಿದರು‌.

ತುಂಬೆಯಿಂದ ಪಣಂಬೂರುವರೆಗೆ ಸಂಸ್ಕರಣೆ ಆದ ಬಳಿಕವೇ ನೀರು ಪೂರೈಕೆ ಮಾಡಲಾಗುತ್ತದೆ. ಅದೇ ರೀತಿ ಬೆಂದೂರಿಗೆ ಬಂದ ನೀರೂ ಕೂಡಾ ಸಂಸ್ಕರಿಸಿದ ಬಳಿಕವೇ ಸರಬರಾಜು ಮಾಡಲಾಗುತ್ತದೆ ಎಂದರು.

ನಗರದ ಹಲವಾರು ಕೆರೆಗಳು ಕೋಟಿಗಟ್ಟಲೆ ಹಣ ಸುರಿದು ಅಭಿವೃದ್ಧಿಯಾದರೂ ಅದರ ನೀರು ಶುದ್ಧವಾಗಿಲ್ಲ. ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೇಯರ್ ಮನೋಜ್ ಕುಮಾರ್, ಈ ಕೆರೆಗಳಿಗೆ ಒಳಚರಂಡಿ ನೀರು ಸಂಪರ್ಕವಾಗುತ್ತಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿವೆ. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Edited By : Shivu K
PublicNext

PublicNext

09/01/2025 08:20 am

Cinque Terre

54.25 K

Cinque Terre

3