ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಕ್ಸಲರ ಶರಣಾಗತಿಗೆ ಏಕಾಂಗಿಯಾಗಿ ಹೋರಾಟಕ್ಕಿಳಿದ ನಿವೃತ್ತ ಪೇದೆ

ಉಡುಪಿ: ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ನಕ್ಸಲ್ ಶರಣಾಗತಿ ಪ್ಯಾಕೇಜ್ ಮತ್ತೆ ಮುನ್ನಲೆಗೆ ಬರುತ್ತಿದೆ. ನಿವೃತ್ತ ಪೇದೆಯೊಬ್ಬರು ಮಧ್ಯಸ್ಥಿಕೆ ವಹಿಸಿ ನಕ್ಸಲರನ್ನು ಮುಖ್ಯವಾಹಿನಿಗೆ ತರುವುದಾಗಿ ಹೇಳಿಕೊಂಡಿದ್ದಾರೆ.‌ ವಿಆರ್ ಎಸ್ ಪಡೆದು ನಿವೃತ್ತಿಯಾದ ಬಳಿಕ ಅವರು ಏಕಾಂಗಿಯಾಗಿ ಈ ಸಾಹಸಕ್ಕೆ ಕೈಹಾಕಿದ್ದಾರೆ.

ಇತ್ತೀಚೆಗೆ ಹೆಬ್ರಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಪೊಲೀಸರು ಎನ್ ಕೌಂಟರ್ ನಡೆಸಿ ಕೊಂದಿದ್ದರು. ನಂತರದ ದಿನಗಳಲ್ಲಿ ತಲೆಮರೆಸಿಕೊಂಡಿದ್ದ ಉಳಿದ ನಕ್ಸಲರ ಶರಣಾಗತಿಗೆ ಸರ್ಕಾರ ಮನವಿ ಮಾಡಿತ್ತು. ಇದೀಗ ವಿಕ್ರಂ ಗೌಡ ಸಹಚರರು ಸೇರಿದಂತೆ ಆರು ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ.ಇದನ್ನು ಹೊರತುಪಡಿಸಿ ಮಲೆನಾಡು ಮತ್ತು ಕರಾವಳಿಯಲ್ಲಿ ಇನ್ನಷ್ಟು ನಕ್ಸಲರು ಉಳಿದುಕೊಂಡಿರುವ ಸಾಧ್ಯತೆ ಇದೆ. ಅವರನ್ನು ಶಸ್ತ್ರಾಸ್ತ್ರ ತ್ಯಜಿಸುವಂತೆ ಮಾಡಿ ಮುಖ್ಯವಾಹಿನಿಗೆ ತರಲು ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ನಿವೃತ್ತ ಪೇದೆ‌ ಹಾಸನ ಮೂಲದ ಡಿ.ಎಸ್ ಪುರುಷೋತ್ತಮ್ ಮಾಧ್ಯಮದ ಮೂಲಕ ಹೇಳಿಕೊಂಡಿದ್ದಾರೆ.

ನಕ್ಸಲ್ ನಾಯಕ ವಿಕ್ರಂ ಗೌಡ ಅವರದ್ದು ನಕಲಿ ಎನ್ ಕೌಂಟರ್ ಎಂದು ನಿವೃತ್ತ ಪೇದೆ ಪುರುಷೋತ್ತಮ್ ಗಂಭೀರ ಆರೋಪ‌ ಮಾಡಿದ್ದಾರೆ. ಇನ್ನು ಮುಂದೆ ನಕಲಿ ಎನ್ ಕೌಂಟರ್ ನಡೆಯಬಾರದು, ನಕ್ಸಲರು ಶರಣಾಗತಿಗೆ ಮುಂದಾಗಬೇಕು. ಇದಕ್ಕಾಗಿ ಸರ್ಕಾರ ತನ್ನನ್ನು ರಾಯಭಾರಿಯಾಗಿ ನೇಮಕ ಮಾಡಬೇಕು. ತಾನು ಏಕಾಂಗಿಯಾಗಿ ಮಲೆನಾಡು ಮತ್ತು ಕರಾವಳಿಯ ಅರಣ್ಯಗಳಿಗೆ ಭೇಟಿ ಕೊಟ್ಟು ಅಡಗಿರುವ ನಕ್ಸಲರ ಮನವೊಲಿಸುತ್ತೇನೆ ಎಂದು ಹೇಳಿದ್ದಾರೆ.ಸರ್ಕಾರ ಈ ಬಗ್ಗೆ ಗಮನಹರಿಸಿ ನಕ್ಸಲರ ಶರಣಾಗತಿಗೆ ಮತ್ತಷ್ಟು ಆಯಾಮಗಳಲ್ಲಿ ಪ್ರಯತ್ನಿಸಬೇಕಿದೆ.‌

ವಿಶೇಷ ವರದಿ: ರಹೀಂ ಉಜಿರೆ

Edited By : Somashekar
PublicNext

PublicNext

08/01/2025 01:42 pm

Cinque Terre

27.79 K

Cinque Terre

0

ಸಂಬಂಧಿತ ಸುದ್ದಿ