ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಹಿತಿ, ಗಣ್ಯರಿಂದ ಆಸ್ಪತ್ರೆಯಲ್ಲಿ ನಾ.ಡಿಸೋಜರ ಅಂತಿಮ‌ ದರ್ಶನ

ಮಂಗಳೂರು: ರವಿವಾರ ಸಂಜೆ ನಿಧನರಾಗಿರುವ ನಾಡಿನ‌ ಪ್ರಸಿದ್ಧ ಸಾಹಿತಿ ನಾ.ಡಿಸೋಜ‌ ಅವರ ಪಾರ್ಥೀವ ಶರೀರ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿದ್ದು, ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಅವರಿಗೆ 87 ವರ್ಷ ವಯಸ್ಸಾಗಿದ್ದ ನಾ.ಡಿಸೋಜ ಅವರು ವಯೋಸಹಜದ ಅನಾರೋಗ್ಯದಿಂದ ರವಿವಾರ ಸಂಜೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಸೋಮವಾರ ಬೆಳಗ್ಗೆ ನಾ.ಡಿಸೋಜರ ಪಾರ್ಥಿವ ಶರೀರವನ್ನು ಅವರ ಸ್ವಂತ ಊರಾದ ಸಾಗರಕ್ಕೆ ಕೊಂಡೊಯ್ಯುವ ಮೊದಲು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಆವರಣದಲ್ಲಿ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.

ಸಾಹಿತಿಗಳಾದ ಕುಂ.ವೀರಭದ್ರಪ್ಪ, ಡಾ.ನಾ.ದಾಮೋದರ ಶೆಟ್ಟಿ, ಡಾ.ಬಿ.ಎ.ವಿವೇಕ ರೈ ಸಂದೇಶ ಸಂಸ್ಥೆಯ ನಿರ್ದೇಶಕ ಫಾ.ಸುದೀಪ್ ಪೌಲ್, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭ ನಾ.ಡಿಸೋಜರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Edited By : Vinayak Patil
PublicNext

PublicNext

06/01/2025 09:53 pm

Cinque Terre

28.96 K

Cinque Terre

1