ಉಡುಪಿ: ಆಕಳಿನ ಕರುವನ್ನು ಮಗುವಿನಂತೆ ತೊಟ್ಟಿಲಲ್ಲಿ ಇಟ್ಟು ತೂಗುವ ಅಪರೂಪದ ಸಂಪ್ರದಾಯವಿದೆ. ಗೋ ರಕ್ಷಣೆ ಹಾಗೂ ಸಾಕಣೆಯಲ್ಲಿ ಅಪರೂಪದ ಕೆಲಸ ಮಾಡುತ್ತಿರುವ ಕಾರ್ಕಳದ ಅನಂತಕೃಷ್ಣ ಗೋಶಾಲೆಯಲ್ಲಿ ಕರುವಿಗೆ ಧೋಳಾರೋಹಣ ಸೇವೆ ನೆರವೇರಿತು.
ಹರಕೆಯ ರೂಪದಲ್ಲಿ ಈ ಸೇವೆಯನ್ನು ನಡೆಸಲಾಗುತ್ತದೆ. ತೊಟ್ಟಿಲು ಸೇವೆಯಿಂದ ಸಂಗ್ರಹವಾಗುವ ಹಣವನ್ನು ಗೋಶಾಲೆಯ ವೆಚ್ಚಗಳಿಗೆ ಬಳಸಲಾಗುತ್ತದೆ. ಪುಟ್ಟ ಕರುವನ್ನು ತೊಟ್ಟಿಲಲ್ಲಿ ತೂಗುವ ಅಪರೂಪದ ದೃಶ್ಯ ಕಣ್ಮನ ಸೆಳೆಯುತ್ತದೆ. ಅನೇಕ ಮಂದಿ ಹರಕೆಯ ರೂಪದಲ್ಲಿ ಈ ಸೇವೆ ನಡೆಸುತ್ತಾರೆ.
PublicNext
07/01/2025 05:34 pm