ಮುಲ್ಕಿ: ಕಿನ್ನಿಗೋಳಿ ಶ್ರೀ ಅಯ್ಯಪ್ಪ ಭಕ್ತ ವೃಂದದ 50ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕೆಂಡ ಸೇವೆ, ಅಪ್ಪ ಸೇವೆ ಪಳನಿ ಗುರು ಸ್ವಾಮಿ ಮತ್ತು ರವೀಶ್ ಗುರು ಸ್ವಾಮಿ ನೇತೃತ್ವದಲ್ಲಿ ನಡೆಯಿತು.
ಶನಿವಾರದಂದು ಮಧ್ಯಾಹ್ನ ಮಹಾಪೂಜೆ ನಂತರ ಮಹಾ ಅನ್ನಸಂತರ್ಪಣೆ,ರಾತ್ರಿ ಪಾಲಶ ವೃಕ್ಷದ ದೀಪಾರಾಧನೆಯ ಮೆರವಣಿಗೆಯು ಯುಗರುಷದಿಂದ ಅಯ್ಯಪ್ಪ ಸ್ವಾಮಿ ಶಿಬಿರದ ವರೆಗೆ ನಡೆಯಿತು.
ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮ ಅಪ್ಪ ಸೇವೆ, ಮುಂಜಾನೆ ಕೆಂಡ ಸೇವೆ ನಡೆಯಿತು. ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದವರಿಂದ ಕುಲ ದೈವೋ ಬ್ರಹ್ಮ ಯಕ್ಷಗಾನ ನಡೆಯಿತು.
PublicNext
07/01/2025 10:13 pm