ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುವ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಜನವರಿ 9ರಿಂದ ಪ್ರಾರಂಭಗೊಂಡು 15ರವರೆಗೆ 7 ದಿನಗಳ ಕಾಲ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಪುತ್ತಿಗೆ ಮಠ ಪ್ರಕಟಣೆಯಲ್ಲಿ ತಿಳಿಸಿದೆ.
ಮಕರ ಸಂಕ್ರಮಣದ ಸಂದರ್ಭದಂದು ಸುಮಾರು 8 ಶತಮಾನಗಳ ಹಿಂದೆ ಮದ್ವಾಚಾರ್ಯರು ದ್ವಾರಕೆಯಿಂದ ಬಂದ ಬಾಲ ಕೃಷ್ಣನ ಮೂರ್ತಿಯನ್ನು ಭಕ್ತರಿಗಾಗಿ ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು ಎಂಬ ಪ್ರತೀತಿ ಇದ್ದು ಅದರಂತೆ ಅಂದಿನಿಂದ ಒಂದು ವಾರ ಕಾಲ ಸಪ್ತೋತ್ಸವ ನಡೆಯುತ್ತಿದೆ.
ಈ ಬಾರಿಯ ಸಪ್ತೋತ್ಸವದಲ್ಲಿ ಭಾಗವಹಿಸಲು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ಆಹ್ವಾನದಂತೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಸಂಸದರಾಗಿರುವ ಜಾನ್ ಮುಲಾಯ್ ಆಗಮಿಸಲಿದ್ದಾರೆ. ಅಲ್ಲದೇ ಗೌಡೀಯ ಮಾಧ್ವ ಮಠದ ಮಹಾಸ್ವಾಮಿಗಳಾದ ಶ್ರೀಪುಂಡರೀಕ ಗೋಸ್ವಾಮಿ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಮಠದ ಪ್ರಕಟಣೆ ತಿಳಿಸಿದೆ.
Kshetra Samachara
08/01/2025 09:10 pm