ಉಡುಪಿ: ಉಡುಪಿಯ ಜನತೆಗೆ ಭಾರೀ ತಲೆ ನೋವಾಗಿದ್ದ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಮೇಲ್ ಸೇತುವೆ ಸರ್ವಿಸ್ ರೋಡನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ವಾಹನದಟ್ಟಣೆ ಹಾಗೂ ಭೂಕುಸಿತದಿಂದ ಪದೇ ಪದೇ ವಿವಾದಕ್ಕೀಡಾಗುತ್ತಿದ್ದ ಈ ಕಾಮಗಾರಿ, ಆಮೆ ಗತಿಯಲ್ಲಿ ಸಾಗಿತ್ತು.
ಬೃಹತ್ ಗಾತ್ರದ ಕಲ್ಲು ಬಂಡೆಗಳು ಪತ್ತೆಯಾದ ಕಾರಣ ರಸ್ತೆ ದುರವಸ್ಥೆ ಮತ್ತು ಕಾಮಗಾರಿ ವಿಳಂಬವಾಗಿ ಸಾಗಿತ್ತು. ಪೂರಕವಾದ ಸರ್ವಿಸ್ ರಸ್ತೆಗಳ ಅನುಕೂಲವಿಲ್ಲದೆ ಜನ ಹೈರಾಣಾಗಿದ್ದರು. ಇದೀಗ ಉಡುಪಿಯಿಂದ ಕುಂದಾಪುರಕ್ಕೆ ತೆರಳುವ ಸರ್ವಿಸ್ ರಸ್ತೆ ಸುಸಜ್ಜಿತಗೊಳಿಸಲಾಗಿದೆ. ಇದರಿಂದ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಆದಷ್ಟು ಶೀಘ್ರ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಜನರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.
Kshetra Samachara
08/01/2025 02:13 pm