ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶರಣಾದ ನಕ್ಸಲರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ - ಎಷ್ಟು ಹಣ ಗೊತ್ತಾ?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ನಿನ್ನೆ (ಗುರುವಾರ) ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ 6 ಜನ ನಕ್ಸಲರು ಶರಣಾಗಿದ್ದಾರೆ. ಆ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಂ ಎದುರು ಕರ್ನಾಟಕದ ನಾಲ್ವರು, ಹೊರ ರಾಜ್ಯದ ಇಬ್ಬರು ನಕ್ಸಲರು ಶರಣಾಗಿದ್ದಾರೆ. ಇದೀಗ ಇಂತಹ ನಕ್ಸಲರಿಗೆ ರಾಜ್ಯ ಸರ್ಕಾರವು ಮೂರು ಕೆಟಗರಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಿದೆ.

ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ

* ಕೆಟಗರಿ ಎ ವರ್ಗದಡಿ ನಮ್ಮ ರಾಜ್ಯದವರೇ ಆಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ, ಕೇಸ್ ಇದ್ದು ಶರಣಾಗುತ್ತಿರುವವರಿಗೆ 7.50 ಲಕ್ಷ ಹಣ ನೀಡುತ್ತಿದೆ.

* ಕೆಟಗರಿ ಬಿ ವರ್ಗದಡಿ ಹೊರ ರಾಜ್ಯದ ನಕ್ಸಲರಿಗೆ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೇ 4 ಲಕ್ಷ ಪ್ಯಾಕೇಜ್ ನೀಡುವುದಾಗಿ ತಿಳಿಸಿದೆ.

* ಕೆಟಗರಿ ಸಿ ವರ್ಗದಡಿ ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಪ್ರಕರಣಗಳು ಇದ್ದರೂ 2 ಲಕ್ಷ ಹಣವನ್ನು ಪ್ಯಾಕೇಜ್ ನಡಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬಾಳೆಹೊಳೆ ಕಳಸದ ವನಜಾಕ್ಷಿ, ಮುಂಡಗಾರು ಶೃಂಗೇರಿಯ ಲತಾ, ದಕ್ಷಿಣ ಕನ್ನಡದ ಕುಂತಲೂರಿನ ಸುಂದರಿ, ರಾಯಚೂರಿನ ಮಾರಪ್ಪೆ ಅರೋಳಿ, ತಮಿಳುನಾಡಿನ ವಸಂತ ಟಿ ಹಾಗೂ ಕೇರಳದ ಎನ್.ಜೀಶಾ ಶರಣಾದ ನಕ್ಸಲರು.

Edited By : Vijay Kumar
PublicNext

PublicNext

09/01/2025 04:30 pm

Cinque Terre

58.47 K

Cinque Terre

2

ಸಂಬಂಧಿತ ಸುದ್ದಿ