ಬ್ರಹ್ಮಾವರ: ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರಿನಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸರಸ್ವತೀ ಮಾತೃಮಂಡಳಿ ನೇತೃತ್ವದಲ್ಲಿ ಸರಸ್ವತೀ ಯಾಗಶಾಲೆಯಲ್ಲಿ ಜನವರಿ 6ರಿಂದ ಆರಂಭಗೊಂಡ ಕೇಪಳ ಪುಷ್ಪದೊಂದಿಗೆ ಕೋಟಿ ಕುಂಕುಮಾರ್ಚನೆಯ ಸಂಕಲ್ಪವು ಗುರುವಾರ 50 ಲಕ್ಷ ಕುಂಕುರ್ಮಾಚನೆ ಜರುಗಿತು.
ಅರಂಭದ ದಿನದಿಂದ ಮಹಾ ಗಣಪತಿಯಾಗ, ಮಹಾಮೃತ್ಯುಂಜಯ ಹವನ, ವಿಷ್ಣುಹವನ ಹಾಗೂ ಶ್ರೀ ಧನ್ವಂತರಿ ಹೋಮ, ಆದಿತ್ಯ ಹೃದಯ ಹೋಮ, ಸೌರ ಸೂಕ್ತ ಹೋಮ, ದುರ್ಗಾ ಹವನ ಹಾಗೂ ಶ್ರೀ ಸರಸ್ವತೀ ಹೋಮ, ಶ್ರೀ ವಿಶ್ವಕರ್ಮ ಹೋಮ ನವಗ್ರಹ ಹೋಮದೊಂದಿಗೆ ಅರ್ಚನೆ ನಡೆಯುತ್ತಿದೆ.
ಹಿಂದೂ ಸಮಾಜದ ಐಕ್ಯತೆ, ಲೋಕ ಕಲ್ಯಾಣಾರ್ಥ ಮತ್ತು ನಾನಾ ಸಂಕಲ್ಪಗಳಿಗಾಗಿ ಕುಂಕುಮ ಮತ್ತು ಕೇಪಳ ಪುಷ್ಪದೊಂದಿಗೆ ಮಂತ್ರ ಪೂರ್ವಕವಾಗಿ ವಿಧಿವತ್ತಾಗಿ ಮಾಡಲಾಗುವ ಅರ್ಚನೆಗೆ ಪ್ರತೀ ದಿನ ನಾನಾ ಭಾಗದಿಂದ ಸಹಸ್ರ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದು, ಸಮಸ್ತ ಜನತೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಪ್ರತೀ ದಿನ ಬೆಳಿಗ್ಗೆ 9 ಗಂಟೆಯಿಂದ 12-15ರ ತನಕ ಮಧ್ಯಾಹ್ನ 2-30ರಿಂದ ಸಂಜೆ 5ರ ತನಕ ಶನಿವಾರದವರೆಗೆ ಜರುಗಿ ಭಾನುವಾರ ಬೆಳಿಗ್ಗೆ ದಶ ಸಹಸ್ರ ಕದಳಿ ಶ್ರೀ ಲಲಿತಾ ಸಹಸ್ರನಾಮ ಹೋಮ ಹಾಗೂ ಶ್ರೀ ಸೂಕ್ತ ಹೋಮದೊಂದಿಗೆ ಕೋಟಿ ಕುಂಕುಮಾರ್ಚನೆ ಸಮರ್ಪಣೆಯಾಗಲಿದೆ.
Kshetra Samachara
09/01/2025 12:19 pm