ಗದಗ : ರೈತರಿಂದ ಕಡಲೆ ಖರೀದಿಸಿದ ಬಾಕಿ ಹಣ ನೀಡದ ವಿಚಾರವಾಗಿ ಇಬ್ಬರು ಮಹಿಳೆಯರು ವಿಷ ಸೇವನೆ ಮಾಡಿದ್ದಾರೆ.ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದು ಇವರಿಗೆ ನ್ಯಾಯ ಸಿಗದ ಹಿನ್ನಲೆ ವಿಷ ಸೇವಿಸಿದ್ದಾರೆ.
ಇನ್ನೂ ಸರಸ್ವತಿ ದಾಸರ ಹಾಗೂ ಗೀತಾ ಬಾಲಪ್ಪನವರ ವಿಷ ಸೇವಿಸಿದ ರೈತ ಮಹಿಳೆಯರಾಗಿದ್ದು ತಕ್ಷಣ ರೈತ ಮಹಿಳೆಯರನ್ನ ಆ್ಯಂಬುಲೆನ್ಸ್ ನಲ್ಲಿ ಜಿಮ್ಸ್ ಆಸ್ಪತ್ರೆಗೆ ಸ್ಥಳೀಯ ಸಿಬ್ಬಂದಿಗಳು ಕರೆದುಕೊಂಡು ಹೋಗಿದ್ದಾರೆ ಕಳೆದೊಂದು ವರ್ಷದಿಂದ ರೈತರಿಗೆ ಹಣ ನೀಡದೇ ದೋಖಾ ಮಾಡಿದ್ದಾರೆ ಎಂದು ಈ ಪ್ರತಿಭಟನೆ ಮಾಡಲಾಗುತ್ತಿದ್ದು ರಸ್ತೆಯಲ್ಲೇ ಉರುಳು ಸೇವೆ ಮಾಡಿ ಕಡಲೆ ಹಣಕ್ಕಾಗಿ ಆಗ್ರಹ ಮಾಡಿದ್ದು
ಹಲವಾರು ಬಾರಿ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನದ ಗದಗ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತ ಬೇಸತ್ತು ವಿಷ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆಗೆ ಬೆಂಬಲಿಸಿ ಉಪವಾಸ ಸತ್ಯಾಗ್ರಹವನ್ನು ರಾಚೋಟೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಾರಂಭಿಸಿದ್ದಾರೆ.
ವರದಿ - ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್ ಗದಗ
PublicNext
08/01/2025 05:15 pm