ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಲೆ ಹಣಕ್ಕಾಗಿ ಅಹೋ ರಾತ್ರಿ ಪ್ರತಿಭಟನೆ

ನರಗುಂದ : ರೈತರಿಂದ ಕಡಲೆ ಖರೀದಿಸಿದ ಬಾಕಿ ಹಣ ನೀಡದ ವಿಚಾರಕ್ಕೆ ಅನ್ನದಾತರ ಪ್ರತಿಭಟನೆ‌ ಅಹೋರಾತ್ರಿ ಮುಂದುವರೆದಿದೆ. ಗದಗ ಜಿಲ್ಲೆಯ ಸುಮಾರು 450 ರೈತರಿಗೆ ಕಡಲೆ ಮಾರಿದ ಹಣದ ಬಾಕಿ 6 ಕೋಟಿ 50 ಲಕ್ಷ ರೂಪಾಯಿ ಹಣ ಕಳೆದ ಒಂದು ವರ್ಷದಿಂದ ಬಂದಿಲ್ಲ.

ಹಲವಾರು ಬಾರಿ ಹಣ ಕೊಡಿಸಿ ಅಂತಾ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೊಚ್ಚಿಗೆದ್ದ ಅನ್ನದಾತರು ಗದಗ ಜಿಲ್ಲಾಡಳಿತ ಭವನದ ಗೇಟ್ ಗೆ ಎತ್ತುಗಳನ್ನ ಕಟ್ಟಿ, ಅಲ್ಲೇ ಅಡುಗೆ ಮಾಡಿ, ಅಲ್ಲೇ ಮಲಗೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಇಡೀ ಚಳಿಯಲ್ಲಿ ಬೆಂಕಿ ಕಾಯಿಸುತ್ತಾ ಕುಳಿತ ರೈತರ ಗೋಳು ಯಾರೂ ಕೇಳದಂತಾಗಿದೆ. ಉತ್ತಿ ಬಿತ್ತಿ ಅನ್ನ ನೀಡಿದ ಅನ್ನದಾತ ಇಂದು ರಸ್ತೆಯಲ್ಲೇ ಅಡುಗೆ ಮಾಡಿ, ರಸ್ತೆಯಲ್ಲೇ ಮಲಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಗದಗ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಎಚ್ಚೆತ್ತು ರೈತರಿಗೆ ನ್ಯಾಯ ಕೊಡಿಸಿ ಅನ್ನ ನೀಡಿದ ಅನ್ನದಾತರ ಕೈ ಹಿಡಿಯಬೇಕಿದೆ.

Edited By : Somashekar
PublicNext

PublicNext

08/01/2025 03:11 pm

Cinque Terre

16.81 K

Cinque Terre

0