ನರಗುಂದ : ಗದಗ ಜಿಲ್ಲಾಡಳಿತ ಎದರುಗಡೆ ರೈತರು ಇಂದು ಪ್ರತಿಭಟನೆ ಮಾಡಿದರು. ಕಳೆದ ವರ್ಷದ ಕಡಲೆ ಖರೀದಿ ಮಾಡಿ ಹಣ ನೀಡಿಲ್ಲ ಹಾಗೂ ಈ ವರ್ಷದ ಕಡಲೆಗೆ ಬೆಂಬಲ ಬೆಲೆ ಇಲ್ಲ ಆದ್ದರಿಂದ ಕರ್ನಾಟಕ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಮತ್ತು ರಾಜ್ಯ ಸಚಿವ ಎಚ್ . ಕೆ. ಪಾಟೀಲ್ ತಮ್ಮ ತವರು ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತರು ಈ ಪ್ರತಿಭಟನೆ ಮಾಡಿದರು.
ಗದಗ ಜಿಲ್ಲಾಡಳಿತ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಗಂಟೆಗಳ ಕಾಲ ರಸ್ತೆ ತಡೆದು ಈ ಪ್ರತಿಭಟನೆ ಮಾಡಲಾಯಿತು. ಇನ್ನು ಮಹಿಳೆಯರು ಒನಕೆ ತೋರಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ರೈತ ಮುಖಂಡರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಇ .ಎನ್ ಕೃಷ್ಣೇಗೌಡ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
PublicNext
07/01/2025 02:04 pm