ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪೊಲೀಸ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಜಾಗೃತಿ

ಇಂದು ಗದಗ ಜಿಲ್ಲಾ ಪೊಲೀಸ್ಅಧಿಕಾಗಳಿಂದ ಗದಗ ನಗರದ ಕಳಸಾಪೂರ ರೋಡ್ ಹತ್ತಿರ ಇರುವ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ಸೈಬರ್, ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ‌ ತಡೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮದಲ್ಲಿ ಸಿಇಎನ್‌ ಠಾಣೆಯ ಡಿಎಸ್ಪಿ ಸೈಬರ್ ಅಪರಾಧ ತಡೆಗಟ್ಟುವ ವಿಧಾನಗಳ ಬಗ್ಗೆ , ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಹಾಗೂ ಜಿಲ್ಲಾ ಪೊಲೀಸ್ ಅಧಿಕೃತ ಜಾಲತಾಣಗಳು, 1930 ಹಾಗೂ 112 ಸೌಲಭ್ಯದ ಬಗ್ಗೆ ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

Edited By : Nagaraj Tulugeri
Kshetra Samachara

Kshetra Samachara

08/01/2025 12:58 pm

Cinque Terre

6.52 K

Cinque Terre

0