ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಆರ್‌ಟಿಒ ಏಜೆಂಟ್ ದಿಬ್ಬೂರು ಸತೀಶ್ ಹಾಗೂ ನಿವೃತ್ತ ಸಾರಿಗೆ ಅಧಿಕಾರಿ ರಾಜು ಮನೆ ಮೇಲೆ ಲೋಕಾಯುಕ್ತ ದಾಳಿ

ತುಮಕೂರು: ಇತ್ತೀಚೆಗಷ್ಟೇ ತುಮಕೂರಿನ ಆರ್‌ಟಿಒ ಕಚೇರಿ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ಸಂಗ್ರಹಿಸಿದ್ದ ಲೋಕಾಯುಕ್ತ ಪೊಲೀಸರು ಬುಧವಾರ ಬೆಳ್ಳಂಬೆಳಿಗ್ಗೆ ದಿಬ್ಬೂರು ವಾಸಿ, ಗೃಹಸಚಿವರ ಆಪ್ತನೆಂದು ಬಿಂಬಿಸಿಕೊಂಡಿದ್ದ ಆರ್ ಟಿ ಓ ಏಜೆಂಟ್ ಸತೀಶ್ ಮನೆ ಮತ್ತು ನಿವೃತ್ತ ಆರ್ ಟಿ ಓ ರಾಜು ಅವರ ಬೆಂಗಳೂರು, ಹೊಸಪೇಟೆ ಮನೆ ಸೇರಿದಂತೆ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರು ಆ‌ರ್ ಟಿ ಓ ಆಗಿ ಹಲವು ವರ್ಷ ಸೇವೆ ಸಲ್ಲಿಸಿದ ರಾಜು ನಿವೃತ್ತರಾಗಿದ್ದರು. ಬೆಂಗಳೂರಿನ ಅವರ ಮನೆ ಮತ್ತು ಬೇನಾಮಿ ಹೆಸರಿನಲ್ಲಿ ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಐದು ಕಡೆ ದಾಳಿ ನಡೆದಿದೆ.ರಾಜು ಅವರಿಗೆ ಆಪ್ತನೆಂದು ಹೇಳಲಾದ ದಿಬ್ಬೂರು ಸತೀಶ್ ಮನೆಗೂ ಲೋಕಾಯುಕ್ತ ಇನ್ಸ್ ಫೆಕ್ಟರ್ ಶಿವರುದ್ರಪ್ಪ ಮೇಟಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಇತ್ತೀಚೆಗಷ್ಟೇ ತುಮಕೂರು ಆರ್ ಟಿ ಓ ಕಚೇರಿಗೆ ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ, ಡಿವೈಎಸ್‌ಪಿ ಹೆಚ್.ಜಿ ರಾಮಕೃಷ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಟ್ರಾಕ್ಟರ್‌ಗಳ ಬೋನೋಪೈಡ್ ಸರ್ಟಿಪಿಕೇಟ್ ವಿತರಣೆಯಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆದು ಅದರಲ್ಲಿ ದಿಬ್ಬೂರು ಸತೀಶ್ ಹಾಗೂ ರಾಜು ಅವರ ಪಾತ್ರ ಇರುವ ಬಗ್ಗೆಯೂ ಸಹ ಹಲವು ವದಂತಿ ಹಬ್ಬಿದ್ದವು. ಈ ಹಿನ್ನಲೆಯಲ್ಲಿ ಸತೀಶ್ ಮನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸುವೆ.

ಲೋಕಾಯುಕ್ತ ಎಸ್‌ಪಿ ಲಕ್ಷ್ಮೀನಾರಾಯಣ್, ಡಿ ವೈ ಎಸ್ ಪಿ ರಾಮಕೃಷ್ಣ ಹೆಚ್. ಜಿ. ಇನ್ಸ್‌ಪೆಕ್ಟರ್‌ಗಳಾದ ಸಲೀಂ, ಸುರೇಶ್‌ ಗೌಡ ಮತ್ತು ಸಿಬ್ಬಂದಿ ಬೆಂಗಳೂರಿನ ವಿಡಿಯ ಲೇಔಟ್, ನಾಗರಬಾವಿ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Edited By : Nagaraj Tulugeri
PublicNext

PublicNext

08/01/2025 10:59 am

Cinque Terre

21.19 K

Cinque Terre

0

ಸಂಬಂಧಿತ ಸುದ್ದಿ