ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಪೊಲೀಸ್ ಠಾಣೆಯಲ್ಲೇ ಕಾಮಲೀಲೆ - ಡಿವೈಎಸ್‌ಪಿ ರಾಮಚಂದ್ರಪ್ಪ ಸಸ್ಪೆಂಡ್

ಮಧುಗಿರಿ: ಜಮೀನು ವ್ಯಾಜ್ಯದ ಕುರಿತು ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಹೀಗೆ ಠಾಣೆಗೆ ಬಂದ ಮಹಿಳೆಯನ್ನು ಖಾಸಗಿ ಕೋಣೆಯೊಂದಕ್ಕೆ ಕರೆದೊಯ್ದ ಡಿವೈಎಸ್‌ಪಿ ರಾಮಚಂದ್ರಪ್ಪ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ವೈರಲ್ ಆಗಿತ್ತು. ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲೇ ಇಂತಹ ಘಟನೆ ನಡೆದಿದ್ದು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿತ್ತು. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿವೈಎಸ್‌ಪಿ ರಾಮಚಂದ್ರಪ್ಪ ತಲೆ ಮರೆಸಿಕೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿ ಐಜಿಪಿ ರಾಮಚಂದ್ರಪ್ಪರನ್ನು ಅಮಾನತು ಮಾಡಿದ್ದಾರೆ.

Edited By : Nagesh Gaonkar
PublicNext

PublicNext

03/01/2025 10:14 pm

Cinque Terre

67.18 K

Cinque Terre

9