ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಡಳಿತಕ್ಕೆ - ಶಾಸಕ ಗುರುರಾಜ ಶೆಟ್ಟಿ ಆಗ್ರಹ

ಬೈಂದೂರು : ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಗುರುರಾಜ್‌ ಗಂಟಿಹೊಳೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯು ಕಳೆದ ಹಲವು ವರ್ಷಗಳಿಂದ ವಲಸೆ ಕಾರ್ಮಿಕರಿಗೆ ಉದ್ಯೋಗದಾತ ಜಿಲ್ಲೆಯಾಗಿ ಪರಿಣಮಿಸಿದ್ದಾರೂ ಸರಕಾರ ವಲಸೆ ಕಾರ್ಮಿಕರಿಗೆ ಕನಿಷ್ಠ ಬೇಕಾಗುವ ವಸತಿ, ನೀರು, ಶೌಚಾಲಯದ ವ್ಯವಸ್ಥೆ ಮಾಡುವಲ್ಲಿ ಸಂಪೂರ್ಣ ಸಫಲವಾಗಿಲ್ಲ.

ಜಿಲ್ಲೆಯಲ್ಲಿ ಪ್ರಸ್ತುತ ಕಟ್ಟಡ ನಿರ್ಮಾಣ,ಗಾರೆ ಕೆಲಸ, ರಸ್ತೆ ಕಾಮಗಾರಿ, ಮನೆಗೆಲಸ ಅಷ್ಟೇ ಅಲ್ಲದೆ ಕೃಷಿ ಕೆಲಸಗಳಿಗೂ ವಲಸೆ ಕಾರ್ಮಿಕರನ್ನು ಹೆಚ್ಚಾಗಿ ಅವಲಂಬಿಸಲಾಗುತ್ತಿದೆ. ಬಾಗಲಕೋಟೆ, ಬಳ್ಳಾರಿ, ರಾಯಚೂರು, ಹಾವೇರಿ, ವಿಜಯ ಪುರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಮರ್ಪಕವಾದ ಸೂರಿಲ್ಲ. ಇದ್ದ ಕಡೆ ವ್ಯವಸ್ಥೆ ಅವ್ಯವಸ್ಥೆ ಯಿಂದ ಕೂಡಿದೆ.

ಜಿಲ್ಲೆಯ ಹಲವು ಕಡೆ ವಲಸೆ ಕಾರ್ಮಿಕರಿಗೆ ಮೂಲ ಸೌಕರ್ಯವಿಲ್ಲದೆ ಶಾಲಾ ಮೈದಾನದಲ್ಲಿ ಮಲಗುವ ಅಥವಾ ದುಬಾರಿ ಮನೆ ಬಾಡಿಗೆ ನೀಡಲಾಗದ ಪರಿಸ್ಥಿಯಲ್ಲಿ ಇದ್ದಾರೆ.

ಹಾಗಾಗಿ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತವೇ ವಸತಿ ಸಮುಚ್ಚಯದ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ವಲಸೆ ಕಾರ್ಮಿಕರು ಇರುವ ಪರಿಸರದಲ್ಲಿ ಉಂಟಾಗುವ ಅನೈರ್ಮಲ್ಯತೆಯನ್ನು ತಡೆಗಟ್ಟ ಬಹುದು.

ಬೈಂದೂರು ಹಾಗೂ ಕುಂದಾಪುರ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇರುವುದರಿಂದ ಅವರಿಗೆ ವಸತಿ ಸಮುಚ್ಚಯ ಮಾದರಿಯಲ್ಲಿ ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಹಾಗೂ ಪ್ರಸ್ತಾವನೆ ತಯಾರಿಸಲು ಈಗಾಗಲೇ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸರಕಾರದ ಹಂತದಲ್ಲಿ ಸಂಬಂಧ ಪಟ್ಟ ಸಚಿವರ ಗಮನಕ್ಕೂ ಈ ವಿಚಾರವನ್ನು ಪತ್ರ ಮುಖೇನ ತರಲಾಗಿದೆ ಹಾಗೂ ಉಡುಪಿ ಜಿಲ್ಲಾಡಳಿತ ಈ ಉದ್ದೇಶಕ್ಕೆ ಅಗತ್ಯ ವಾಗಿ ಬೇಕಾಗಿರುವ ಕನಿಷ್ಠ ನಿವೇಶನ ವನ್ನು ಒದಗಿಸಬೇಕು ಪ್ರಕಟಣೆಯಲ್ಲಿ ಶಾಸಕರು ತಿಳಿಸಿದ್ದಾರೆ..

Edited By : PublicNext Desk
Kshetra Samachara

Kshetra Samachara

07/01/2025 06:38 pm

Cinque Terre

944

Cinque Terre

0

ಸಂಬಂಧಿತ ಸುದ್ದಿ