ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಪರ್ಧೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಸೋಮು ನಾಗರಾಜ

ಗದಗ: ಗ್ರಾಮೀಣ ಭಾಗಗಳಲ್ಲಿ ಇಂತಹ ಸ್ಪರ್ಧೆಗಳು ನಶಿಸಿಹೋಗುತ್ತಿವೆ.ಗ್ರಾಮೀಣ ಪ್ರದೇಶದ ಸ್ಪರ್ಧೆಗಳಾದ ಟಗರಿನ ಕಾಳಗ ನಡೆಸುತ್ತಿರುವುದು ಶ್ಲಾಘನೀಯ.ಸ್ಪರ್ಧೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸೋಮು‌ ನಾಗರಾಜ ಹೇಳಿದರು.

ತಾಲೂಕಿನ ನಾಗರಾಳ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ರಕ್ಷಾಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಟಗರಿನ ಕಾಳಗದ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದಲಿತ ಯುವ ಮುಖಂಡರ ಅಂದಪ್ಪ ಮಾದರ ಮಾತನಾಡಿ ಇಂದಿನ ಯುವಕರು ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಇಂತಹ ಕ್ರೀಡೆಗಳನ್ನು ಉಳಿಸಿ ಬೆಳಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ.ಅಂದಾಗ ಮಾತ್ರ ದೇಶಿ ಕ್ರೀಡೆಗಳು ಉಳಿಯಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಕೃಷ್ಣಾ ಜಿ. ದೇಶಪಾಂಡೆ, ಶಿವನಗೌಡ ಸಿದ್ದನಗೌಡ್ರು, ಗುರುನಾಥ ದೇಶಪಾಂಡೆ ಸತ್ಯಪ್ಪ ಮಾದರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

07/01/2025 11:22 am

Cinque Terre

8.68 K

Cinque Terre

0

ಸಂಬಂಧಿತ ಸುದ್ದಿ