ಗದಗ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ, ಬೈಕ್ ಸವಾರ ಹಾಗೂ ಪಾದಚಾರಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಗದಗನ ಜೀಮ್ಸ್ ರಸ್ತೆಯ ಬಚಪನ್ ಶಾಲೆಯ ಬಳಿ ನಡೆದಿದೆ.
ಅಪಘಾತದಲ್ಲಿ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ನೀಲಪ್ಪ ಹನುಮಪ್ಪ ಸೋಗಿ (62) ಹಾಗೂ ಗದಗನ ಆದಿತ್ಯ ನಗರದ ನಿವಾಸಿ ನೀಲಪ್ಪ ಹನುಮಪ್ಪ ಕಟಗಿ (32) ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮೃತ ನೀಲಪ್ಪ ಕಟಗಿ ಗದಗನ ಆದಿತ್ಯ ನಗರದ ತಮ್ಮ ನಿವಾಸದಿಂದ ಧೋಬಿಘಾಟ ಬಳಿ ಇರುವ ಸ್ನೇಹಿತನ ಮನೆಗೆ ಹೊರಟಿದ್ದನು.
ಇದೇ ವೇಳೆ ಬಚಪನ್ ಶಾಲೆ ಕಡೆಯಿಂದ ವೃದ್ಧ ಮೈಲಾರಪ್ಪ, ರಸ್ತೆ ದಾಟುತ್ತಿರುವಾಗ, ಬೈಕ್ ಸವಾರ ನೀಲಪ್ಪ ಮೈಲಾರಪ್ಪನಿಗೆ ಡಿಕ್ಕಿ ಹೊಡೆದು ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ನೀಲಪ್ಪನನ್ನ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ,ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಇತ್ತ ಪಾದಚಾರಿ ಮೈಲಾರಪ್ಪನನ್ನ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಫಲಿಸದೆ ಈತನೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮೃತ ನೀಲಪ್ಪ ಕಟಗಿ ಕೆಆರ್ ಎಸ್ ಪಕ್ಷದಲ್ಲಿ ಕಾರ್ಯಕರ್ತನಾಗಿದ್ದು, ಸಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ. ಇತ್ತ ಮೈಲಾರಪ್ಪ ಮ್ಯಾರೇಜ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Kshetra Samachara
07/01/2025 11:19 am