ಗದಗ: ತಾಲೂಕಿನದ್ಯಾಂತ ಕಳೆದ ನಾಲ್ಕೈದು ದಿನಗಳಿಂದ ಚಿರತೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರಿಂದ್ದಾಗಿ ಗ್ರಾಮೀಣ ಪ್ರದೇಶದ ಜನರು ಅದರಲ್ಲೂ ವಿಶೇಷವಾಗಿ ರೈತರು ಮತ್ತು ಕೃಷಿ ಕೂಲಿ ಕಾರರು ಭೀತಿಗೆ ಒಳಗಾಗಿದ್ದಾರೆ.
ತಾಲ್ಲೂಕಿನ ನಾದಿಗಟ್ಟಿ ಆದರಹಳ್ಳಿ ರಣತೂರ ರಾಮಗೇರಿ ಬಸ್ಸಾಪೂರ ಸೇರಿದಂತೆ ನೇರೆಯ ಕುಂದ ಗೋಳ ತಾಲ್ಲೂಕಿನ ಗುಂಜಳ ಪಶುಪತಿಹಾಳ ಏರೇ ಬೂದಿಹಾಳ ಗ್ರಾಮಗಳ ಅತ್ತ ಕಾಣಿಸಿಕೊಳ್ಳುತ್ತಿದೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿಗೆ ಜನ ಬೆಸತ್ತು ಬಿದ್ದಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಸ್ಪಷ್ಟಣೆ ನೀಡಿದ್ದು ಇದೊಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿದ್ದೆ ಅರಣ್ಯ ಇಲಾಖೆಗೆ ಚಿರತೆಯ ಹೆಜ್ಜೆಯ ಗುರುತುಗಳು ಪತ್ತೆಯಾಗಿಲ್ಲ ಆದರಿಂದ ಜನತೆ ಒದಂತಿಗೆ ಕಿವಿಗೊಡದೆ ಯಾವುದಾದರೂ ಕಾಡು ಪ್ರಾಣಿಗಳು ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
Kshetra Samachara
06/01/2025 03:14 pm