ಬ್ರಹ್ಮಾವರ: ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ನಾನಾ ಸಂಘ ಸಂಸ್ಥೆಗಳ ಸಹಕಾರದಲ್ಲಿ ಉಡುಪಿ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳ 21 ನೇ ಸಾಹಿತ್ಯ ಸಮ್ಮೇಳನ ಬಾರಕೂರು ಸಂಕಮ್ಮ ತಾಯಿ ರೆಸಾರ್ಟ್‌ನಲ್ಲಿ ಜರುಗಿದ ಕಾರ್ಯಕ್ರಮವನ್ನು ಬೆಂಗಳೂರು ರಂಗ ನಟ ನಿರ್ದೇಶಕ ಎಸ್ ಎನ್ ಸೇತುರಾಮ್ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ ಸಾಹಿತ್ಯ ಮನುಷ್ಯನ ಬದುಕನ್ನು ರೂಪಿಸಬಲ್ಲ ಉತ್ತಮ ಸಾಧನ, 365 ದೇವಾಲಯಗಳ ನಗರ ಬಾರಕೂರು ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉತ್ತುಂಗದಲ್ಲಿ ಇದ್ದಂತೆ ಸಾಹಿತ್ಯಿಕವಾಗಿ ಕೂಡಾ ಬೆಳೆಯುತ್ತಿರುವುದು ಕನ್ನಡ ಭಾಷೆಗೆ ಭಲಬಂದಂತಾಗಿದೆ. ಸಾಹಿತ್ಯವನ್ನು ಪೋಷಿಸುವ ಊರು ಸಮೃದ್ಧ ಎಂದು ಪರಿಗಣಿಸಬಹುದು ಎಂದರು.
10 ನೇ ತರಗತಿಯ ವಿದ್ಯಾರ್ಥಿ ಬ್ರೋವಿನ ಅಗೇರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕವಿ ಗೋಷ್ಠಿ, ವಿಚಾರಗೋಷ್ಠಿಯ ಬಳಿಕ ಮಂಗಳೂರಿನ ಗೋಪಾಡ್ಕ್ರ್‌ಇವರಿಂದ ಸ್ವರೂಪ- ಸ್ಮೃತಿ ಶಿಕ್ಷಣ ಜರುಗಿತು.ಕಾರ್ಯಕ್ರಮದ ಪ್ರಧಾನ ಸಂಘಟಕ ರಾಮ ಭಟ್ಟ ಸಜಂಗದ್ದೆ. ಸಖಾರಾಮ್ ಸೋಮಯಾಜಿ, ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತಿಯಲ್ಲಿ ಸಮಾರೋಪ ಜರುಗಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
Kshetra Samachara
06/01/2025 05:33 pm