ಮುಲ್ಕಿ: ಹಳೆಯಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ 46ನೇ ವರ್ಷದ ಮಹಾಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು
ದಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ವಿಶೇಷ ಪ್ರಾರ್ಥನೆ, ಇರುಮುಡಿ ಕಟ್ಟುವುದು, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ಅರ್ಚಕ ವೃಂದ, ಸಮಿತಿಯ ಅಧ್ಯಕ್ಷ ಜಯ ಜಿ ಸುವರ್ಣ, ಗೌರವಾಧ್ಯಕ್ಷ ಜೈ ಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಕರುಣಾಕರ ಗೋಳಿದಡಿ, ಪದಾಧಿಕಾರಿಗಳಾದ ಶಂಕರ್ ಆರ್ ಕೋಟ್ಯಾನ್, ದಿನೇಶ್ ಸ್ವಾಮಿ, ನಿತೇಶ್ ಕುಬಲ ಗುಡ್ಡೆ ದಾಮೋದರ ಅಮೀನ್ ಗೋಳಿದಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/01/2025 04:22 pm