ಉಡುಪಿ: ಪಂಪ ಭಾರತ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಆಗಿರುವುದು ಜಾಗತಿಕ ವಿದ್ಯಮಾನವಾಗಿದೆ. ಇದನ್ನು ನಾವೆಲ್ಲ ಸಂಭ್ರಮಿಸಬೇಕಾಗಿದೆ. ಕನ್ನಡ ಮೊದಲ ಕಾವ್ಯ ಪಂಪ ಭಾರತ ಜಗತ್ತಿನ ಯಾವುದೇ ಭಾಷೆಗೂ ಅನುದಾನ ಆಗಿಲ್ಲ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.
ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಜಂಟಿ ಆಶ್ರಯದಲ್ಲಿ ಕೇಂದ್ರದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎನ್.ಟಿ. ಭಟ್ ಅವರ ‘ಪಂಪ ಭಾರತ ರೀಟೋಲ್ಡ್ ಇಂಗ್ಲಿಷ್ ನೆರೇಟಿವ್’ ಪುಸ್ತಕ ಅನಾವರಣಗೊಳಿಸಿ ಅವರು ಮಾತನಾಡಿದರು.
ಅನುವಾದ ಎಂಬುದು ಶಬ್ಧ ಶಬ್ಧಗಳ ಭಾಷಾಂತರ ಅಲ್ಲ. ಅದು ಒಳಗಿನ ಧ್ವನಿಯಾಗಬೇಕು. ಅನುವಾದದಿಂದ ಕನ್ನಡದ ಸಂಸ್ಕೃತಿಯನ್ನು ಇನ್ನೊಂದು ಕಡೆ ದಾಖಲಿಸಲು ಸಾಧ್ಯವಾಗುತ್ತದೆ ಎಂದರು.
ಎಂಜಿಎಂ ಕಾಲೇಜಿನ ಅಧ್ಯಕ್ಷ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ, ವಿಮರ್ಶಕ ರಮೇಶ್ ಭಟ್ ಬೆಳಗೊಡು ಕೃತಿ ಪರಿಚಯ ಮಾಡಿದರು. ಲೇಖಕ ಡಾ.ಎನ್.ಟಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Kshetra Samachara
07/01/2025 04:27 pm