ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಅಪಾಯಕಾರಿ ವ್ಹೀಲಿಂಗ್ ಮಾಡಿ ರೀಲ್ಸ್ ಮಾಡುತ್ತಿದ್ದ ಯುವಕ ಪೊಲೀಸರ ಅತಿಥಿ!

ಮಣಿಪಾಲ: ಸಹಸವಾರನನ್ನು ಅಪಾಯಕರ ರೀತಿಯಲ್ಲಿ ಕುಳ್ಳಿರಿಸಿಕೊಂಡು ರೀಲ್ಸ್‌ಗಾಗಿ ವ್ಹೀಲಿಂಗ್ ಮಾಡುತ್ತಿದ್ದ ಸ್ಕೂಟರ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ಆಶಿಕ್‌ ಎಂಬಾತನೇ (19) ಬಂಧಿತ ಯುವಕ.

ಆಶಿಕ್ ತನ್ನ ದ್ವಿಚಕ್ರ ವಾಹನದಲ್ಲಿ ಮಣಿಪಾಲ ಈಶ್ವರ ನಗರದಿಂದ ವಿದ್ಯಾರತ್ನ ನಗರದ ಕಡೆಗೆ ತೆರಳುವ ರಸ್ತೆಯಲ್ಲಿ ಅಪಾಯ ತರುವ ರೀತಿಯಲ್ಲಿ ವ್ಹೀಲಿಂಗ್ ನಡೆಸುತ್ತಿದ್ದ. ಈತ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರದಾಡಿತ್ತು. ಅಲ್ಲದೇ ಈತ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಆತನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Shivu K
PublicNext

PublicNext

06/01/2025 11:21 am

Cinque Terre

55.89 K

Cinque Terre

4

ಸಂಬಂಧಿತ ಸುದ್ದಿ