ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪರವಾನಿಗೆ ಇಲ್ಲದ ಪಿಸ್ತೂಲ್ ಮಿಸ್ ಫೈರ್ ಯುವಕನಿಗೆ ಗುಂಡೇಟು - ಪ್ರಕರಣ ದಾಖಲು

ಮಂಗಳೂರು: ಪರವಾನಿಗೆ ಇಲ್ಲದ ಪಿಸ್ತೂಲ್ ಮಿಸ್ ಫೈರ್ ಆಗಿ ಯುವಕನಿಗೆ ಗುಂಡೇಟು ತಗುಲಿದ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನವರಿ 6ರಂದು ವಾಮಂಜೂರು ಬಳಿಯ ಸೆಕೆಂಡ್ ಹ್ಯಾಂಡ್ ಸೇಲ್ಸ್ ಬಝಾರ್‌‌ ಮಾಲಕ ಅದ್ದು ಅಲಿಯಾಸ್ ಬದ್ರುದ್ದೀನ್ (34) ಎಂಬಾತ ಪರವಾನಿಗೆ ಇಲ್ಲದ ಪಿಸ್ತೂಲ್ ಹೊಂದಿದ್ದ. ಈತ ತನ್ನ ಅಂಗಡಿಯಲ್ಲಿ ಕುಳಿತುಕೊಂಡು ಪಿಸ್ತೂಲ್ ಅನ್ನು ಪರೀಕ್ಷಿಸುತ್ತಿದ್ದ. ಈ ವೇಳೆ ಟ್ರಿಗ್ಗರ್ ಒತ್ತಿದ್ದಾನೆ. ಪರಿಣಾಮ ಫೈರ್ ಆಗ ಅಂಗಡಿಯಲ್ಲಿ ಕುಳಿತಿದ್ದ ಮೊಹಮ್ಮದ್ ಸಫ್ವಾನ್ (25) ಎಂಬಾತನಿಗೆ ಗುಂಡು ತಗುಲಿದೆ. ತಕ್ಷಣ ಗಾಯಾಳು ಸಫ್ವಾನ್‌ನನ್ನು ಜನಪ್ರಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಪರವಾನಿಗೆ ಇಲ್ಲದ ಪಿಸ್ತೂಲ್ ಅನ್ನು ಮೂಡುಶೆಡ್ಡೆ ನಿವಾಸಿ ಇಮ್ರಾನ್ ಎಂಬಾತ ಅದ್ದು ಅಲಿಯಾಸ್ ಬದ್ರುದ್ದೀನ್‌ನಿಗೆ ನೀಡಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

07/01/2025 11:02 pm

Cinque Terre

3.67 K

Cinque Terre

0

ಸಂಬಂಧಿತ ಸುದ್ದಿ