ಮಣಿಪಾಲ: ಈ ಸ್ಥಳ ವಿಹಾರಕ್ಕೆ ಬೆಸ್ಟ್ ಪ್ಲೇಸ್. ಹೀಗಾಗಿ ಮಣಿಪಾಲ ಸುತ್ತಮುತ್ತಲ ನೂರಾರು ಮಂದಿ ಇಲ್ಲಿಗೆ ಆಗಮಿಸಿ ಕೆರೆಯ ಸುತ್ತಲೂ ಇರುವ ಟ್ರ್ಯಾಕ್ ನಲ್ಲಿ ವಾಕಿಂಗ್ , ಜಾಗಿಂಗ್ ಮಾಡ್ತಾರೆ. ಸುಸ್ತಾದ್ರೆ ಅಲ್ಲೇ ಇರುವ ಕಲ್ಲುಬೆಂಚುಗಳ ಮೇಲೆ ಕುಳಿತು ಕೆರೆಯ ಸೌಂದರ್ಯ ಸವೀತಾರೆ. ಆದ್ರೆ ಇತ್ತೀಚೆಗೆ ಪ್ರೇಮಿಗಳ ಹಾವಳಿಯಿಂದ ವಿಹಾರಕ್ಕೆ ಬರುವವರಿಗೆ ಕಿರಿಕಿರಿಯಾಗುತ್ತಿದೆ.
ಮಣಿಪಾಲದಲ್ಲಿರುವ ಮಣ್ಣಪಳ್ಳ ಕೆರೆ ಈಗ ಪ್ರೇಮಿಗಳ ಅಡ್ಡೆಯಾಗಿದೆ. ಪ್ರೇಮಿಗಳು ,ಜೋಡಿಗಳು ಇಲ್ಲಿಗೆ ಬಂದು ಅಸಭ್ಯವಾಗಿ ವರ್ತಿಸ್ತಾರೆ. ಹೀಗಾಗಿ ಮಹಿಳೆಯರು, ವೃದ್ಧರು ಇಲ್ಲಿ ಓಡಾಡೋದಕ್ಕೂ ಮುಜುಗರ ಪಡುವ ಪರಿಸ್ಥಿತಿ ಬಂದಿದೆ. ಮಧ್ಯಾಹ್ನ ಆದ್ರೆ ಸಾಕು, ಪಡ್ಡೆ ಹುಡುಗ-ಹುಡುಗಿಯರು ಪ್ರೇಮಿಗಳು ಇಲ್ಲಿಗೆ ಎಡತಾಕುತ್ತಾರೆ. ಕೆರೆಯ ಸುತ್ತ ಇರುವ ಸಿಟೌಟ್, ಮರಗಿಡ, ಪೊದೆಗಳ ಮರೆಯಲ್ಲಿ ಕುಳಿತು ಪರಸ್ಪರ ಹೆಗಲ ಮೇಲೆ ಕೈ ಇಟ್ಟು ಮಾಡಬಾರದ್ದನ್ನು ಮಾಡ್ತಾರೆ.ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಸರೋವರದ ಎಲ್ಲೆಂದರಲ್ಲಿ ಮೈಮರೆಯುವ ಪ್ರೇಮಿಗಳು ಹಿರಿಯರು ಓಡಾಡೋದು ಕಂಡ್ರೂ ಕೇರೇ ಮಾಡಲ್ಲ. ಹಾಡಹಗಲೇ ಕಿಸ್, ಹಗ್ ನಲ್ಲಿ ತನ್ಮಯರಾಗ್ತಾರೆ. ಒಟ್ಟಾರೆ ಸದುದ್ದೇಶಕ್ಕೆ ಬಳಕೆಯಾಗಬೇಕಿದ್ದ ಪಾರ್ಕ್ ಈಗ ಕಾಮುಕರ ಅಡ್ಡೆಯಾಗಿ ಬದಲಾಗುತ್ತಿದೆ.ಯುವ ಜೋಡಿ ಪೊಲೀಸರು ಬಂದ ಕೂಡಲೇ ಅಣ್ಣ ತಂಗಿ ಎಂದು ನಾಟಕವಾಡಿ ಅಲ್ಲಿಂದ ಮೆಲ್ಲ ಎಸ್ಕೇಪ್ ಆಗ್ತಾರೆ.
ಇನ್ನಾದರೂ ಮಣಿಪಾಲ ಪೊಲೀಸರು ದಿನನಿತ್ಯ ಗಸ್ತು ತಿರುಗುವುದರ ಜೊತೆಗೆ ಇಂತಹ ಯುವಜೋಡಿಗಳ ಕಾಮದಾಟಕ್ಕೆ ಬ್ರೇಕ್ ಹಾಕಬೇಕಿದೆ. ಸಭ್ಯರು ನೆಮ್ಮದಿಯಾಗಿ ವಿಹಾರ ಮಾಡಲು ಪೂರಕ ವಾತಾವರಣ ನಿರ್ಮಾಣ ಮಾಡಬೇಕಿದೆ.
PublicNext
07/01/2025 04:40 pm