ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : "ನನ್ನ ಅಣ್ಣನಿಗೂ ಶರಣಾಗತಿಗೆ ಅವಕಾಶ ಕೊಡಬೇಕಿತ್ತು" - ಮೃತ ನಕ್ಸಲ್ ವಿಕ್ರಂಗೌಡ ಸಹೋದರನ ಅಳಲು

ಹೆಬ್ರಿ: 6 ನಕ್ಸಲರ ಶರಣಾಗತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮೃತ ನಕ್ಸಲ್ ನಾಯಕ ವಿಕ್ರಂಗೌಡ ಸಹೋದರ ಸುರೇಶ್ ಗೌಡ, ನನ್ನ ಸಹೋದರ ವಿಕ್ರಂ ಗೌಡನಿಗೂ ಇದೇ ರೀತಿ ಶರಣಾಗಲು ಅವಕಾಶ ನೀಡಬೇಕಿತ್ತು.

ನಕ್ಸಲ್ ಶರಣಾಗತಿ ಒಳ್ಳೆಯ ವಿಚಾರವಾಗಿದ್ದು, ಅವರೆಲ್ಲ ಮುಂದೆ ಉತ್ತಮ ಜೀವನ ನಡೆಸಲಿ .

ನನ್ನ ಅಣ್ಣನಿಗಾದ ಪರಿಸ್ಥಿತಿ ಮುಂದೆ ಯಾರಿಗೂ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಕೆಲವು ದಿನಗಳ ಹಿಂದೆ ಹೆಬ್ರಿಯಲ್ಲಿ ಎನ್ಕೌಂಟರ್ ಮಾಡಿ ಪೊಲೀಸರು ಹತ್ಯೆಗೈದಿದ್ದರು. ಇದೀಗ ವಿಕ್ರಂ ಗೌಡ ಸಹಚರರ ಶರಣಾಗತಿ ಬಗ್ಗೆ ಮಾತನಾಡಿರುವ ಸಹೋದರ ಸುರೇಶ್ ಗೌಡ , ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರವನ್ನು ನಮಗೂ ನೀಡಲಿ. ಅವರ ಕುಟುಂಬಸ್ಥರು ನೋವು ಅನುಭವಿಸಬಾರದು.

ಈ ಯೋಜನೆ ಮೊದಲೇ ಘೋಷಣೆ ಮಾಡಿದ್ದಿದ್ದರೆ ನನ್ನ ಅಣ್ಣನೂ ಶರಣಾಗುತ್ತಿದ್ದ . ಒಳ್ಳೆಯ ಜೀವನ ನಮ್ಮೊಂದಿಗೆ ನಡೆಸುತ್ತಿದ್ದ.ಸ್ವಲ್ಪ ದಿನ ಜೈಲು ವಾಸ ಅನುಭವಿಸಿ ಮುಂದೆಯಾದರೂ ಒಳ್ಳೆಯ ಜೀವನ ನಡೆಸೋ ಅವಕಾಶ ಇತ್ತು. ಶರಣಾಗುವ ನಕ್ಸಲರಿಗೆ ನೀಡುವ ಪರಿಹಾರ ವಸತಿ ಸೌಲಭ್ಯವನ್ನು ನಮಗೂ ನೀಡಿ.

ನಾವು ಬಹಳ ಕಷ್ಟದಲ್ಲಿದ್ದೇವೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಮ್ಮನ್ನು ಇಲ್ಲಿಯವರೆಗೆ ಯಾವುದೇ ಸಮಿತಿ ಭೇಟಿ ಮಾಡಿಲ್ಲ. ಅಧಿಕಾರಿಗಳ ಕಿರುಕುಳದಿಂದ ಅಣ್ಣ ನಕ್ಸಲ್ ಹೋರಾಟಕ್ಕೆ ಇಳಿದಿದ್ದ.

ಅಣ್ಣನಿಗೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿದ್ದರು. ಆತನ ಎನ್ಕೌಂಟರ್ ಬಗ್ಗೆಯೂ ತನಿಖೆಯಾಗಲಿ ಎಂದು‌ ಮನವಿ ಮಾಡಿದ್ದಾರೆ.

Edited By : Ashok M
PublicNext

PublicNext

08/01/2025 05:08 pm

Cinque Terre

27.71 K

Cinque Terre

0

ಸಂಬಂಧಿತ ಸುದ್ದಿ