ಮುಲ್ಕಿ:ಸ್ವಾಲಂಭನೆಯ ಜೀವನದೊಂದಿಗೆ, ಸಂಘಟನೆ ಮೂಲಕ ಮುಂದೆ ಸಾಗಿದರೆ ಯಶಸ್ಸು ಸಾಧ್ಯ ಎಂದು ಮನೋವೈದ್ಯಕೀಯ ಸಮಾಲೋಚಕ ಶ್ರೀಪತಿ ಭಟ್ ಶಿಮಂತೂರು ಹೇಳಿದರು ಅವರು ಟೀಮ್ ಆದರ್ಶ ಸಂಜೀವಿನಿ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೊತ್ಸವದ ಅಂಗವಾಗಿ ಮುಲ್ಕಿ ಸಮೀಪದ ಲಿಂಗಪ್ಪಯ್ಯಕಾಡು ಚನ್ನಮಲ್ಲಿಕಾರ್ಜುನ ಮಠದ ಬಳಿ ನಡೆದ ಸಹಾಯ ಹಸ್ತ ನಿಧಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವ್ಯಸನ ಮುಕ್ತ ಸಮಾಜವನ್ನು ಕಟ್ಟುವ ಕೆಲಸ ಯುವಕರು ಮಾಡಬೇಕು ಎಂದರು.
ಈ ಸಂದರ್ಭ ಮೂಲ್ಕಿ ನ ಪಂ ಅಧ್ಯಕ್ಷ ಸತೀಶ್ ಅಂಚನ್, ಉಪಧ್ಯಕ್ಷೆ ಲಕ್ಷೀ, ಉದ್ಯಮಿ ಅಭಿಲಾಷ್ ಶೆಟ್ಟಿ ಕಟೀಲು, ಉದ್ಯಮಿ ಅಶ್ವಥ್ ಕೆ ಪಣಪಿಲ, ನ ಪಂ ನಾಮ ನಿರ್ದೇಶಿತ ಸದಸ್ಯ ಭೀಮಾಶಂಕರ್ ಆರ್ ಕೆ, ಅಮೃತ ಸಂಜೀವಿನಿಯ ಪ್ರಮುಖರಾದ ವಸಂತ ಕುಲಾಲ್ ಪಣಪಿಲ, ಸುಧಾಮ ಫೌಂಡೇಶನ್ ಅಧ್ಯಕ್ಷ ಸುನೀಲ್ ಅಳ್ವ, ಅರಸು ಕಂಬಳ ಸಮಿತಿಯ ಉಪಾಧ್ಯಕ್ಷ ಮೋಹನ್ ಕೋಟ್ಯಾನ್, ಟೀಮ್ ಆದರ್ಶ ಸಂಜೀವಿನಿ ಸಂಸ್ಥೆಯ ಅಧ್ಯಕ್ಷ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು ಸಂತೋಷ್ ನಂಬಿಯಾರ್ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ, ಶಿಕ್ಷಣ ಕ್ಷೇತ್ರದ ಸಾಧಕರಿಗೆ ವಿದ್ಯಾರ್ಥಿ ವೇತನ, ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ಸಾಧಕರ ನೆಲೆಯಲ್ಲಿ ವಿಠಲ್ ಎನ್ ಎಂ ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
Kshetra Samachara
05/01/2025 10:45 pm