ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಅಕ್ರಮ ಗೋಸಾಗಾಟ - ಇಬ್ಬರು ವಶಕ್ಕೆ

ಮೂಡುಬಿದಿರೆ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಪಡೆದ ಹಿಂದೂ ಸಂಘಟನಾ ಕಾರ್ಯಕರ್ತರು ಕಾರ್ಯಚರಣಿ ನಡೆಸಿ ವಾಹನ ಸಹಿತ ಗೋಸಾಗಾಟಗಾರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ರಾತ್ರಿ ಮೂಡುಬಿದಿರೆಯಲ್ಲಿ ನಡೆದಿದೆ.

ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳಾದ ಪ್ರವೀಣ್ ಡಿಸೋಜ ಹಾಗೂ ಭಾಸ್ಕರ್ ಶೆಟ್ಟಿ ಗೋಸಾಗಾಟಗಾರರು. ಇವರಿಬ್ಬರು ಮೂಡುಬಿದಿರೆ ತಾಲೂಕಿನ ತೋಡಾರು ಶಾಂತಿಗಿರಿಯಲ್ಲಿ ಅಕ್ರಮವಾಗಿ ಪಿಕಪ್‌ನಲ್ಲಿ ಎರಡು ಗೋವುಗಳನ್ನು ತೋಡಾರಿನ ಅದ್ದು ಎಂಬವರ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಈ ವೇಳೆ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ವಾಹನಗಳನ್ನು ತಡೆದು ನಿಲ್ಲಿಸಿ, ಎರಡು ಗೋವುಗಳೊಂದಿಗೆ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದರು.

ಅಕ್ರಮ ಗೋ ಸಾಗಾಟ ವಿಚಾರದಲ್ಲಿ ಶನಿವಾರ ರಾತ್ರಿ ಕೇಸು ದಾಖಲಾಗಿದ್ದರೂ ರವಿವಾರ ಬೆಳಗ್ಗೆ 7.20ರ ಸುಮಾರಿಗೆ ಇಬ್ಬರೂ ಆರೋಪಿಗಳು ಅಶ್ವತ್ಥಪುರದಲ್ಲಿರುವ ಹಾಲಿನ ಡೈರಿಗೆ ಹಾಲು ಹಾಕಿ ಬಂದಿದ್ದಾರೆನ್ನಲಾಗಿದೆ. ಭಾಸ್ಕರ ಶೆಟ್ಟಿ ಅವರು ತೆಂಕಮಿಜಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

05/01/2025 10:41 pm

Cinque Terre

9.61 K

Cinque Terre

3

ಸಂಬಂಧಿತ ಸುದ್ದಿ