ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಜೇಬು ಕಳ್ಳತನ, ಬ್ಯಾಗ್ನಿಂದ ಹಣ, ಆಭರಣ ಲಪಟಾಯಿಸುವ ಕೃತ್ಯ ನಡೆಯುತ್ತಿದ್ದು ಜ.6ರಂದು ಪ್ರತ್ಯೇಕ 2 ಘಟನೆಯಲ್ಲಿ ಓರ್ವ ಮಹಿಳೆಯ ಬ್ಯಾಗ್ನಿಂದ 15 ಪವನ್ ಚಿನ್ನಾಭರಣ ಮತ್ತು ಇನ್ನೋರ್ವ ಮಹಿಳೆಯ 25 ಸಾವಿರ ರೂ. ನಗದು ಕಳವು ಆಗಿದೆ. ಈ ಪೈಕಿ ಚಿನ್ನಾಭರಣ ಕಳವಾಗಿರುವ ಬಗ್ಗೆ ಮಹಿಳೆಯೋರ್ವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಡಬ ಸಮೀಪದ ಮರ್ಧಾಳ ನೆಕ್ಕಿತ್ತಡ್ಕ ನಿವಾಸಿ ಹಬೀಬ ಎಂಬವರು ಮಧ್ಯಾಹ್ನ ಪೆರ್ನೆ ಹಾಲ್ನಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರ ಬ್ಯಾಗ್ನಿಂದ 15 ಪವನ್ ಚಿನ್ನಾಭರಣವನ್ನು ಎಗರಿಸಲಾಗಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಝಾಹಿದಾ ಎಂಬವರು ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಬಳಿಯಲ್ಲಿ ಕ್ಲಿನಿಕ್ಗೆ ಬಂದಿದ್ದು, ವೈದ್ಯರನ್ನು ಭೇಟಿ ಮಾಡಿ ಮರಳಿ ಮನೆಗೆ ಹೋಗುವಾಗ ಬಸ್ ನಿಲ್ದಾಣದಲ್ಲಿ ಪುತ್ತೂರು ಹೋಗುವ ಬಸ್ ಹತ್ತಿ ದಾರಂದಕುಕ್ಕು ತಲುಪುವುದರ ಒಳಗಾಗಿ ಬ್ಯಾಗ್ನಲ್ಲಿದ್ದ 25 ಸಾವಿರ ರೂ. ಕಳವಾಗಿರುವುದಾಗಿ ದೂರು ನೀಡಿದ್ದಾರೆ.
Kshetra Samachara
07/01/2025 02:44 pm