ಮಂಗಳೂರು:ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದದೋಣಿಯ ಸಮೀಪ ಯಾಂತ್ರೀಕೃತ ಬೋಟ್ ಹಾದು ಹೋದ ಪರಿಣಾಮ ಬಲೆ, ಹಗ್ಗ ಸೇರಿದಂತೆ ಸುಮಾರು 1.90 ಲ.ರೂ ನಷ್ಟ ಸಂಭವಿಸಿರುವ ಬಗ್ಗೆ ಕರಾವಳಿ ಕಾವಲು ಪೊಲೀಸರಿಗೆ ದೂರು ನೀಡಲಾಗಿದೆ.
ಮೂರು ಮಂದಿ ಮೀನುಗಾರರು ಡಿ24ರಂದು ರಾತ್ರಿ 11ಕ್ಕೆ ಸಿದ್ದಿವಿನಾಯಕ ದೋಣಿಯಲ್ಲಿ ಗಿಲ್‌ನೆಟ್ ನವಮಂಗಳೂರು ಬಂದರಿನ ಪಶ್ಚಿಮ ದಿಕ್ಕಿಗೆ ಸುಮಾರು
20 ನಾಟಿಕಲ್ ಮೈಲು ದೂರದಲ್ಲಿ ಬಲೆ ಹಾಕಿ ಮೀನುಗಾರಿಕೆ ನಡೆಸುತ್ತಿದ್ದರು. ಆಗ ಎಲ್ಲ ಬೆಳಕನ್ನು ಬಂದ್ ಮಾಡಿ ಬಂದ ಅನಾಮಧೇಯ ಯಾಂತ್ರೀಕೃತ ಬೋಟೊಂದು ಬಲೆಯನ್ನು ಎಳೆದುಕೊಂಡು ಹೋಗಿದೆ. ಅಲ್ಲದೆ ಮೀನುಗಾರಿಕೆ ಸಾಮಗ್ರಿಗಳಾದ ರೋಪ್, ಬೋಯ್‌ಗಳು ಸಮುದ್ರ ಪಾಲಾಗಿದೆ. ಇದರಿಂದ ಸುಮಾರು 400 ಕೆ.ಜಿಬಲೆ ಹಾಗೂ ಇತರ ಮೀನುಗಾರಿಕ ಸಾಮಗ್ರಿಗಳು ನಾಶವಾಗಿ 1.90 ಲ.ರೂ. ನಷ್ಟ ಉಂಟಾಗಿದೆ ಎಂದು ದೋಣಿಯ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
08/01/2025 02:27 pm