ಬೈಲಕುಪ್ಪೆ : ಟಿಬೆಟಿಯನ್ನರ ಪರಮೋಚ್ಚ ಧರ್ಮ ಗುರುಗಳಾದ 14ನೇ ದಲೈಲಾಮರವರು 30 ದಿನಗಳ ವಿಶ್ರಾಂತಿಗಾಗಿ ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ, ಬೈಲಕುಪ್ಪೆಯ ನೂತನ ನಾಲ್ಕನೇ ಕ್ಯಾಂಪಿನಲ್ಲಿರುವ ಎಲಿಪ್ಯಾಡ್ ಗೆ ಬಂದಿಳಿದರು.
ದಲಾಯಿಲಾಮರವರು ಆಗಮಿಸುತ್ತಿದ್ದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟಿಬೆಟಿಯನ್ನರು, 6 ಕಿ.ಮೀ. ರಸ್ತೆಯುದ್ದಕ್ಕೂ ಟಿಬೆಟಿಯನ್ ಮಾದರಿಯ ಉಡುಪು ಧರಿಸಿ ಬೆಳಿಗ್ಗೆ 6 ಗಂಟೆಯಿಂದಲೇ ತಮ್ಮ ನೆಚ್ಚಿನ ಗುರುಗಳ ದರ್ಶನಕ್ಕಾಗಿ ಕಾದು ಕುಳಿತಿದ್ದರು.
ಝಡ್ ಪ್ಲಸ್ ಭದ್ರತೆ ಹೊಂದಿರುವ ದಲಾಯಿಲಾಮರವರು ಆಗಮಿಸುತ್ತಿದ್ದಂತೆ, ಸುಮಾರು 250ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಎಲಿಪ್ಯಾಡ್ ನಿಂದ ಕಾರಿನ ಮುಖಾಂತರ ಲಕ್ಷ್ಮಿಪುರ ಗ್ರಾಮದಲ್ಲಿರುವ ತಶಿಲಾಂಪು ದೇವಸ್ಥಾನಕ್ಕೆ ತೆರಳಿದರು.
ದೇವಸ್ಥಾನದ ಬಳಿ ಬಗೆ ಬಗೆಯ ಹೂಗಳನ್ನು ಹಾಕುವುದರ ಮೂಲಕ ತಮ್ಮ ಸುಪ್ರೀಂ ಗುರುಗಳನ್ನು ಬೌದ್ಧ ಭಿಕ್ಷುಗಳು ಬರಮಾಡಿಕೊಂಡರು.
ಸ್ಥಳೀಯ ಟಿಬೆಟಿಯನ್ನರು ಟಿಬೆಟಿಯನ್ ಮಾದರಿಯ ನೃತ್ಯ ಪ್ರದರ್ಶಿಸಿದರು. ಈ ಸಂದರ್ಭ ನೂತನ ವರ್ಷದ ಶುಭಾಶಯ, ಜೀವನ ಸಂದೇಶವನ್ನು ದಲಾಯಿಲಾಮರವರು ನೀಡಿದರು.
PublicNext
05/01/2025 09:58 pm