ವಿರಾಜಪೇಟೆ : ಇತಿಹಾಸ ಪ್ರಸಿದ್ಧಿಯನ್ನು ಹೊಂದಿರುವ ವಿರಾಜಪೇಟೆಯ ಸಿದ್ಧಾಪುರ ರಸ್ತೆಯಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ಉತ್ಸವಮೂರ್ತಿಯ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ವ್ಯವಸ್ಥಿತವಾಗಿ ಐದು ದಶಕಗಳಿಂದಲೂ ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿಯಿಂದ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪನ ವಾರ್ಷಿಕ ಉತ್ಸವವು ವಾರ್ಷಿಕ ಪೂಜಾ ಮಹೋತ್ಸವಗಳು ಕ್ಷೇತ್ರಪಾಲಕ ಗುಳಿಕ ಪೂಜೆ ಮತ್ತು ಮಂಡಲ ಪೂಜೆಯೊಂದಿಗೆ ಆರಂಭಗೊಂಡು ಗಣಪತಿ ಹೋಮ, ಲಕ್ಷಿ ಪೂಜೆ, ಸರಸ್ವತಿ ಪೂಜೆ, ತುಲಭಾರ, ಲಕ್ಷಾರ್ಚನೆ, ಮಹಾಪೂಜೆ ನಡೆದು ರಾತ್ರಿ 12:30 ಗಂಟೆಗೆ ಅಯ್ಯಪ್ಪ ದೇವಾಲಯದಲ್ಲಿ ಸುಬ್ರಹ್ಮಣ್ಯನಿಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸುವುದರೊಂದಿಗೆ ಉತ್ಸವ ತೆರೆ ಎಳೆಯಲಾಯಿತು.
ಉತ್ಸವಕ್ಕೆ ಧಾರ್ಮಿಕ ವಿಧಿವಿಧಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವಿಶೇಷ ಮೆರುಗನ್ನು ನೀಡಿದವು. ಸಂಜೆ ಬೃಹತ್ ಶೋಭಾಯಾತ್ರೆಯಲ್ಲಿ ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವರ ಕಥಾ ಸಾರಾಂಶವನ್ನು ಸಾರುವ ಚಲನವಲನಗಳಿಂದ ಕೂಡಿದ ಸ್ತಬ್ಧ ಚಿತ್ರ, ಕೇರಳ ಚಂಡೆ, ಮಂಗಳೂರಿನ ಚಿಲಿ-ಪಿಲಿ ಬೊಂಬೆ, ಮಾಲಧಾರಿಗಳಿಂದ ವಿಶೇಷ ಭಜನಾ ತಂಡಗಳು ಮೆರವಣಿಗೆಗೆ ಸಾಥ್ ನೀಡಿತು.
Kshetra Samachara
04/01/2025 01:00 pm