ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ : ನಾಪೋಕ್ಲು ಕೊಡವ ಸಮಾಜದ ಬೆಳ್ಳಿ ಹಬ್ಬದ ಆಚರಣೆ

ನಾಪೋಕ್ಲು: ಒಂದೆಡೆ ಕಾಪಾಳಕಳಿ ಮತ್ತೊಂದೆಡೆ ಅಜ್ಜಪ್ಪ ತೆರೆ.. ಜೊತೆಯಲ್ಲಿ ದುಡಿಕೊಟ್ಟು ವಾದ್ಯ ಕೊಡವ ಸಾಂಪ್ರದಾಯಕ ಕಲೆಗಳು. ಇದರ ಜೊತೆ ಜೊತೆಗೆ ಸಾಂಪ್ರದಾಯಿಕ ದಿರಿಸಿನಲ್ಲಿ ಸಾಗಿದ ಕೊಡವ ಯುವಕ ಯುವತಿಯರು. ಇಲ್ಲಿನ ಕೊಡವ ಸಮಾಜದ ಬೆಳ್ಳಿ ಹಬ್ಬದ ಆಚರಣೆ ಅಂಗವಾಗಿ ಮಾರುಕಟ್ಟೆ ಆವರಣದಿಂದ ಆರಂಭಗೊಂಡ ಮೆರವಣಿಗೆ ವೀಕ್ಷಕರ ಗಮನ ಸೆಳೆಯಿತು.

ಸುಮಾರು ಒಂದು ಗಂಟೆಗಳ ಕಾಲ ಸಾಗಿದ ಮೆರವಣಿಗೆಯಲ್ಲಿ ಕೊಡವ ಸಂಸ್ಕೃತಿಯ ವೈವಿಧ್ಯಮಯ ಕಲೆಗಳು ಅನಾವರಣಗೊಂಡವು. ಕೊಡವ ವಾಲಗಕ್ಕೆ ಸಾಂಪ್ರದಾಯಿಕ ಉಡುಗೆತೊಡುಗೆಯೊಂದಿಗೆ ನರ್ತಿಸುತ್ತಾ ಮೆರವಣಿಗೆಯಲ್ಲಿ ಸಾಗಿ ಸಂಭ್ರಮಿಸಿದರು. ಸ್ಥಳೀಯ ಮಾರುಕಟ್ಟೆ ಆವರಣದ ಬಳಿ ಕೊಡವ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊ೦ಜಾ೦ಡ ಎ. ಗಣಪತಿ ಗಾಳಿಗೆ ಗುಂಡು ಹೊಡೆಯುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಬಳಿಕ ಕೊಡವ ಸಮಾಜದಲ್ಲಿ ಸಮಾಗಮಗೊಂಡ ಮೆರವಣಿಗೆ ಸಭಾ ಕಾರ್ಯಕ್ರಮಕ್ಕೆ ನಾಂದಿ ಹಾಡಿತು. ಬೆಳ್ಳಿ ಹಬ್ಬದ ಅಂಗವಾಗಿ ಉಮ್ಮತಾಟ್, ಕತ್ತಿಯಾಟ್, ಕೋಲಾಟ್, ಪರಿಯ ಕಳಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

Edited By : Suman K
Kshetra Samachara

Kshetra Samachara

31/12/2024 11:37 am

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ