ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಜಪೇಟೆ: ಕೊಡವ ಸಮುದಾಯದ ಬಗ್ಗೆ ಹಾಗೂ ಕೊಡವ ಮಹಿಳೆಯರ ಬಗ್ಗೆ ಅವಹೇಳನ - ಪೊಲೀಸರಿಗೆ ದೂರು

ವಿರಾಜಪೇಟೆ: ಕೊಡವ ಸಮುದಾಯದ ಬಗ್ಗೆ ಹಾಗೂ ಕೊಡವ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿರಾಜಪೇಟೆ ಕಂಡಂಗಾಲ ಗ್ರಾಮದ ಅಟ್ರಂಗಡ. ಎ. ದಿವಿಲ್ ಕುಮಾರ್ ಎಂಬವರು ಕಲ್ಲುಮುಟ್ಟು ಅನುದೀಪ್ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪುಕಾರು ನೀಡಿದ್ದಾರೆ.

ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ಒಂದು ವಾರದ ಹಿಂದೆ ನಡೆದ ಘಟನೆ ಬಗ್ಗೆ ಕೊಡವ ಹಾಗೂ ಗೌಡ ಸಮುದಾಯದ ದ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಈ ವಿಷಯ ಪ್ರಸ್ತಾಪ ಗೊಂಡಿತು.ಇದೆ ವಿಚಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾದಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಒಂದು ವಾರದ ಒಳಗೆ ದೇವಾಲಯದ ಆಡಳಿತ ಮಂಡಳಿಯ ತೀರ್ಮಾನವನ್ನು ತಿಳಿಸುವಂತೆ ಮಾಹಿತಿ ನೀಡಿದ್ದಾರೆ, ಅಲ್ಲದೆ ಈ ವಿಷಯದ ಬಗ್ಗೆ ಯಾವುದೇ ತರಹದ ಸಂದೇಶ ಕಳಿಸಿ ದಂತೆ ನಿರ್ದೇಶನ ನೀಡಿದ್ದಾರೆ. ಆದರೂ ಕೂಡ ಈ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಕಾರಿ ಸಂದೇಶ ಹರಿಬಿಟ್ಟಿರುವ ಕಾರಣ ಅವರ ಮೇಲೆ ಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

02/01/2025 07:48 pm

Cinque Terre

1.12 K

Cinque Terre

0