ಮಡಿಕೇರಿ: ಸಮಾಜ ಸುಧಾರಕಿ, ರಾಷ್ಟ್ರದ ಪ್ರಥಮ ಶಿಕ್ಷಕಿಯವರಲ್ಲಿ ಒಬ್ಬರಾದ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಆಚರಿಸಲಾಯಿತು.ಜಿಲ್ಲಾ ಉಪ ಯೋಜನಾ ಸಮನ್ವಯ ಅಧಿಕಾರಿ ಎಂ.ಕೃಷ್ಣಪ್ಪ, ಶಾಲೆಯ ಮುಖ್ಯೋಪಾಧ್ಯಾಯರಾದ ಸುಶೀಲ, ಎಸ್‍ಡಿಎಂಸಿ ಅಧ್ಯಕ್ಷರಾದ ಜಗದೀಶ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇತರರು ಪಾಲ್ಗೊಂಡು ಸಾವಿತ್ರಿ ಬಾಯಿಫುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು.
ಮಹಾರಾಷ್ಟ್ರದಲ್ಲಿ 1831 ರ ಜನವರಿ, 03 ರಂದು ಸಾವಿತ್ರಿ ಬಾಯಿಫುಲೆ ಅವರು ಜನಿಸಿದ್ದು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ ಎಂದು ಗಣ್ಯರು ಸ್ಮರಿಸಿದರು. ಸಾವಿತ್ರಿ ಬಾಯಿಫುಲೆ ಅವರು ರಾಷ್ಟ್ರದ ಸ್ತ್ರೀವಾದಿ ಚಳುವಳಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ. ಪತಿ ಜ್ಯೋತಿ ಬಾಫುಲೆ ಅವರ ಜೊತೆಗೂಡಿ ಮಹಾರಾಷ್ಟ್ರದ ಪುಣೆಯಲ್ಲಿ 1848ರಲ್ಲಿ ರಾಷ್ಟ್ರದ ಮೊದಲ ಬಾಲಕಿಯರ ಶಾಲೆ ತೆರೆದಿದ್ದು ವಿಶೇಷವೇ ಸರಿ ಎಂದು ಕೃಷ್ಣಪ್ಪ ಹೇಳಿದರು.
ಜಾತಿಭೇದ, ಲಿಂಗಾಧಾರಿತ ಅಸಮಾನತೆ ಹೋಗಲಾಡಿಸಲು ಅವರು ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಸಾವಿತ್ರಿಬಾಯಿ ಫುಲೆ ಅವರ ನಿಲುವುಗಳು ಮತ್ತು ಅವರ ಸುಧಾರಣಾ ಕಾರ್ಯಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದವು ಎಂದು ಕೃಷ್ಣಪ್ಪ ಅವರು ವಿವರಿಸಿದರು.
Kshetra Samachara
03/01/2025 07:33 pm