ನರಗುಂದ: ಪಟ್ಟಣದ ದಂಡಾಪೂರ ಒಣಿಯಲ್ಲಿ ಆಟ ಆಡುವ ವೇಳೆ ಬಾಲಕ ಮೃತ ಪಟ್ಟ ಘಟನೆ ನಡೆದಿದೆ. ಆಟವಾಡುವ ಸಮಯದಲ್ಲಿ ಅವಿತುಕೊಳ್ಳಲು ಹೋಗಿ ಗೋಡೆಯ ಪಕ್ಕದಲ್ಲಿ ಕುಳಿತ ಬಾಲಕನ ಮೇಲೆ ಗೋಡೆ ಕುಸಿದು ಬಿದ್ದಿದೆ.
ಪ್ರದೀಪ್ ಗೋನಾಳ (8) ಎಂಬಾತನೇ ಮೃತಪಟ್ಟ ನೃತದೃಷ್ಟ ಬಾಲಕ. ಗೋಡೆ ಕುಸಿದು ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಂತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Kshetra Samachara
05/01/2025 09:13 pm