ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗನಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ

ಗದಗ : ನಿರ್ಮಿತಿ ಕೇಂದ್ರದ‌ ಇಂಜಿನಿಯರ್ ಒಬ್ಬರು ನಗರದ ಖಾಸಗಿ‌ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹೊಸ ಬಸ್ ನಿಲ್ದಾಣದ ಬಳಿ ಇರುವ ಖಾಸಗಿ ಲಾಡ್ಜ್ ನ ರೂಮ್ ಒಂದರಲ್ಲಿ ಇಂಜಿನಿಯರ್ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ.

ಶಂಕರಗೌಡ ಪಾಟೀಲ (54) ಆತ್ಮಹತ್ಯೆ ಮೃತ ಇಂಜಿನಿಯರ್ ಆಗಿದ್ದು, ಗದಗ ನಗರದ ಹಾತಲಗೇರಿ ನಾಕಾ ಬಳಿಯ ನಿವಾಸಿಯಾಗಿದ್ದಾರೆ.‌ ಗದಗ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಸೈಟ್ ಕಡೆ ಹೋಗಿ ಬರ್ತಿನಿ ಎಂದು ಮನೆಯವರ‌ ಬಳಿ ಹೇಳಿ ಹೋಗಿದ್ದ ಇಂಜಿನಿಯರ್, ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಗದಗ ಜಿಲ್ಲೆ ರೋಣ ತಾಲೂಕಿನ ನಿರ್ಮಿತಿ ಕೇಂದ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಆತ್ಮಹತ್ಯೆ ಬಗ್ಗೆ ಅವರ ಸಹೋದರ ಕೃಷ್ಣಗೌಡ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಲ‌ ಇದ್ದಿಲ್ಲ. ಆದರೆ ಸಾಕಷ್ಟು ಆಸ್ತಿ ಇದೆ. ನಮ್ಮ ಸಹೋದರ ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವನೇ ಅಲ್ಲ. ನೇಣು ಹಾಕಿ‌ ಕೊಲೆ ಮಾಡಿದ್ದಾರೆ. ಅದು ಬ್ಯಾಂಕ್ ಸಾಲಕ್ಕೆ ಜಾಮೀನು ಆಗಿದ್ದ ವಿಷಯಕ್ಕಾದ್ರೂ ಆಗಿರಬಹುದು.‌ ಪ್ರಮೋಶನ್ ವಿಚಾರವಾಗಿಯೂ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಒಟ್ನಲ್ಲಿ ಈ‌ ಮೂರು ವಿಷಯಕ್ಕೆ ಸಾವು ಆಗಿರಬಹುದು ಅಂತ ಆರೋಪಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೂಂಗೆ ಪೊಲೀಸರು ನನ್ನನ್ನು ಬಿಡಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ. ನಿರ್ಮಿತಿ ಕೇಂದ್ರದ ಬಗ್ಗೆಯೂ ಅನುಮಾನ ಇದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನಿಡಿ,‌ಪರಿಶೀಲನೆ ನಡೆಸಿದ್ದಾರೆ.‌ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : PublicNext Desk
PublicNext

PublicNext

03/01/2025 04:56 pm

Cinque Terre

35.15 K

Cinque Terre

0