ಬ್ರಹ್ಮಾವರ: ಪೊಲೀಸ್ ಠಾಣೆ ಬಳಿ ನೂತನವಾಗಿ ನಿರ್ಮಾಣಗೊಂಡ ಪೊಲೀಸ್ ವಸತಿ ನಿಲಯದಿಂದ ಹರಿದುಬರುವ ನೀರು ಶೇಖರಣೆಗೊಂಡು ಹರಿಯಲು ಜಾಗ ಇಲ್ಲದೇ ಸಾಂಕ್ರಾಮಿಕ ರೋಗ ಭೀತಿ ಎದುರಾಗಿ ಸಾರ್ವಜನಿಕರು ಮತ್ತು ವಸತಿ ನಿಲಯವಾಸಿಗಳು ತೀರಾ ಅತಂಕ್ಕೀಡಾಗಿದ್ದಾರೆ.
ಪೊಲೀಸ್ ಠಾಣೆ ವೃತ್ತ ನಿರೀಕ್ಷಕರ ಠಾಣೆ ಬಳಿ ನಗರ ಮಧ್ಯಭಾಗದಲ್ಲಿರುವ ವಸತಿ ನಿಲಯದ ಏ ಮತ್ತು ಬಿ ಬ್ಲಾಕ್ ಬಳಿಯಲ್ಲಿ ಸ್ನಾನ ಇನ್ನಿತರ ಉಪಯೋಗದ ಬಳಿಕದ ನೀರು ಹರಿದುಬಂದು 3 ಟ್ಯಾಂಕ್‌ಗಳಲ್ಲಿ ಸೋಸಿಬಂದು ಮತ್ತೆ ಚರಂಡಿಗೆ ಹರಿದುಹೋಗುವ ವ್ಯವಸ್ಥೆ ಮಾಡಲಾಗಿತ್ತು.
ಚರಂಡಿಗೆ ಹೋಗುವುದನ್ನು ಗ್ರಾಮಪಂಚಾಯತಿಯವರು ಬಂದ್ ಮಾಡಿದ ಕಾರಣ ಪ್ರತಿ 2 ದಿನಕ್ಕೆ ತುಂಬಿ ಮೇಲೆ ಬರುವುದನ್ನು ಇಲ್ಲಿನ ಠಾಣಾ ಸಿಬ್ಭಂದಿ ಅವರದೇ ಖರ್ಚಿನಲ್ಲಿ ಚಿಕ್ಕಪಂಪ್ ಖರೀದಿಸಿ ತಾತ್ಕಾಲಿಕವಾಗಿ ಠಾಣೆಯ ತಗ್ಗು ಪ್ರದೇಶದ ಹೊಂಡವೊಂದಕ್ಕೆ ಬಿಡುತ್ತಿದ್ದಾರೆ.
ಸಮಾಜದ, ಸಾರ್ವಜನಿಕರ ಶಾಂತಿ ಕಾಪಾಡುವ ಚಿಕ್ಕ ಮಕ್ಕಳ ಸಂಸಾರ ಇರುವ ಪೊಲೀಸ್ ವಸತಿ ನಿಲಯದ ಕಲುಷಿತ ನೀರು ಹರಿದು ಹೋಗುವಂತೆ ಅಥವಾ ಇಂಗಿಸುವ ಕಾರ್ಯ ಮಾಡಿ ಸಾಂಕ್ರಾಮಿಕ ರೋಗ ಬರದಂತೆ ತಡೆಗಟ್ಟುವ ಶಾಶ್ವತ ಕೆಲಸ ಮಾಡಬೇಕಾಗಿದೆ.
Kshetra Samachara
05/01/2025 09:12 pm