ಬಜಪೆ : ಬಜಪೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೆಂಜಾರ್ ಪ್ರದೇಶದ ಶ್ರೀ ದೇವಿ ಕಾಲೇಜಿನ ಹಾಸ್ಟೆಲ್‌ನಿಂದ
ಪೈಪ್‌ಲೈನ್ ಮೂಲಕ ಕೊಳಚೆ ನೀರು ಹರಿದು ಗಬ್ಬೆದ್ದು ನಾರುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಹಾಗೂ ಜಾಗದ ಮಾಲೀಕರಾದ ಸುಂದರಿ ಶೆಡ್ತಿ ಅವರು ಇದರಿಂದ ಮುಕ್ತಿ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ಈ ಕುರಿತು ಪಂಚಾಯತ್‌ಗೆ ದೂರು ನೀಡಿದ್ದಾರೆ. ಪಂಚಾಯತ್ ನೋಟಿಸ್ ಕೊಟ್ಟರೂ ಸಂಬಂಧಪಟ್ಟ ಕಾಲೇಜ್ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಟ್ಟಡದ ಕೊಳಚೆ ನೀರನ್ನು ಬೇರೆಯವರ ಜಾಗಕ್ಕೆ ಬಿಡಲು ಅವಕಾಶ ಇರುವುದಿಲ್ಲ. ಹೀಗಾಗಿ ಪಂಚಾಯತ್ ಗೆ ನೀಡಿರುವ ದೂರಿನ ಆಧಾರದಲ್ಲಿ ಸಂಸ್ಥೆಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಸೂಕ್ತ ಕ್ರಮ ಜರುಗಿಸದೆ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಕೊಳಚೆ ನೀರು ಹರಿಯುವುದನ್ನು ತಡೆಯಲು ಇಂಗು ಗುಂಡಿ ಅಳವಡಿಸುವಂತೆ ಪಂಚಾಯತ್ ಅಧಿಕಾರಿಗಳ ಸೂಚನೆಗೂ ಕಾಲೇಜ್ ಆಡಳಿತ ಮಂಡಳಿ ಕ್ಯಾರೆ ಎನ್ನುತ್ತಿಲ್ಲ ಎಂದು ಎಂದು ದೂರಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
PublicNext
07/01/2025 04:10 pm