ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾರ್ಮಾಡಿ: ನದಿಗೆ ಮಾಂಸ ತ್ಯಾಜ್ಯ ಎಸೆದ ಪ್ರಕರಣ-ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ: ಚಾರ್ಮಾಡಿ ಮೃತ್ಯುಂಜಯ ನದಿಯಲ್ಲಿ ದನದ ಮಾಂಸದ ತ್ಯಾಜ್ಯ ಗಳನ್ನು ಎಸೆದ ಆರೋಪಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಚಾರ್ಮಾಡಿ ಗ್ರಾಮದ ಕತ್ರಿಗುಡ್ಡೆ ನಿವಾಸಿ ಮುಹಮ್ಮದ್ ಇರ್ಷಾದ್ (28) ಹಾಗೂ ಕುವೆಟ್ಟು ಗ್ರಾಮದ ಸುನ್ನತ್‌ರೆ ನಿವಾಸಿ ಮಹಮ್ಮದ್ ಅಜ್ಮಲ್ (30) ಬಂಧಿತ ಆರೋಪಿಗಳು. ಧರ್ಮಸ್ಥಳ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ಅನ್ನಾರು ಎಂಬಲ್ಲಿ ಡಿ.17ರಂದು ಮೃತ್ಯುಂಜಯ ನದಿಯ ಬದಿಯಲ್ಲಿ ಕಿಡಿಗೇಡಿಗಳು ಹತ್ಯೆಗೈದ ಜಾನುವಾರುಗಳ ತಲೆ ಹಾಗೂ ಇತರೆ ತ್ಯಾಜ್ಯಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಎಸೆದು ಹೋಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

05/01/2025 03:07 pm

Cinque Terre

6.18 K

Cinque Terre

0

ಸಂಬಂಧಿತ ಸುದ್ದಿ