ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ:ಬಡ ವಿದ್ಯಾರ್ಥಿಗಳ ವಿದ್ಯಾ ನಿಧಿಗೆ ಸಹಾಯ ಹಸ್ತ, ಆಟೋ ಚಾಲಕರ ಸಾಮಾಜಿಕ ಕಳಕಳಿ ಅಭಿನಂದನೀಯ

ಮುಲ್ಕಿ: ಹಳೆಯಂಗಡಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನಿವೃತ್ತ ರಿಕ್ಷಾ ಚಾಲಕರಿಗೆ ಗೌರವ ಕಾರ್ಯಕ್ರಮ ಹಳೆಯಂಗಡಿ ರಿಕ್ಷಾ ನಿಲ್ದಾಣದ ಆವರಣದಲ್ಲಿ ನಡೆಯಿತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ಬಡ ವಿದ್ಯಾರ್ಥಿಗಳ ವಿದ್ಯಾ ನಿಧಿಗೆ ಸಹಾಯ ಹಸ್ತ ಆಟೋ ಚಾಲಕರ ಸಾಮಾಜಿಕ ಕಳಕಳಿ ಅಭಿನಂದನೀಯವಾಗಿದ್ದು ನಿರಂತರವಾಗಿ ನಡೆಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾಗೇಶ್ ಬಂಗೇರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಬೊಳ್ಳೂರು ಜುಮ್ಮಾ ಮಸೀದಿ ಖತೀಬ್ ಮೊಹಮ್ಮದ್ ಆಸ್ಗರ್ ಫೈಝಿ, ಸಿ ಎಸ್ ಐ ಚರ್ಚ್ ನ ಸಭಾ ಪಾಲಕ ಅಮೃತ್ ರಾಜ್ ಖೋಡೆ, ಉದ್ಯಮಿ ಸೂರ್ಯ ಕುಮಾರ್, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್, ಗೌತಮ್ ಜೈನ್ ಮುಲ್ಕಿ ಅರಮನೆ, ನರೇಂದ್ರ ಪ್ರಭು, ಸಲಹಾ ಸಮಿತಿಯ ಸದಸ್ಯರಾದ ಹ್ಯಾರಿಸ್ ನವರಂಗ್

ಅಬ್ದುಲ್ ಅಜೀಜ್, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ನಿರೂಪಿಸಿದರು

ಬಳಿಕ ವಿದ್ಯಾನಿಧಿಗೆ ಸಹಾಯ ಹಸ್ತ, ನಿವೃತ್ತ ಆಟೋ ಚಾಲಕರಿಗೆ ಸನ್ಮಾನ , ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

Edited By : PublicNext Desk
Kshetra Samachara

Kshetra Samachara

05/01/2025 03:01 pm

Cinque Terre

984

Cinque Terre

0

ಸಂಬಂಧಿತ ಸುದ್ದಿ