ಮೈಸೂರು: ಜ 13 ರಿಂದ ಆರಂಭವಾಗಲಿರುವ ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ
ಹಸ್ತ್ಥಾನ ಅಂಕುರಾರ್ಪಣಯ ಮೂಲಕ ಜಾತ್ರಾ ದಾರ್ಮಿಕ ಆಚರಣೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಚಾಲನೆ ದೊರೆತಿದೆ.
ಜ.13 ರಿಂದ ಜ.17 ರವರೆಗೆ ಸುಮಾರು ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಜ.13 ರಂದು ಬಂಡಿ ಉತ್ಸವ, ಜ.14 ರಂದು ಶ್ರೀ ತ್ರಿಪುರ ಸುಂದರಿ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವ, ಜ.15 ರಂದು ಮಹಾ ರಥೋತ್ಸವ ಜ.16 ರಂದು ಚಿಗುರು ಕಡಿಯುವುದು, ಜ. 17 ರಂದು ಮಹಾ ಅಭಿಷೇಕ ನಡೆಯಲಿದೆ.
ಮೂಗೂರು ಗ್ರಾಮದ ಸಮೀಪದ ಹೊಸಹಳ್ಳಿ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಚಿಗುರು ಕಡಿಯುವ ಕ್ಷೇತ್ರ ಅಮ್ಮ ನವರ ದೇಗುಲದಲ್ಲಿ ಕಂಕಣಧಾರಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ, ನಂತರ ಮೂಗೂರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಛತ್ರಿ ಚಾಮರ ಮಂಗಳವಾದ್ಯದೊಂದಿಗೆ ಆಗಮಿಸಿ ಅಮ್ಮ ನವರ ಹಸ್ತ್ಥಾನ ಅಂಕುರಾರ್ಪಣಗೆ ಗ್ರಾಮಸ್ಥರು ಒಗ್ಗೂಡಿ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಸ್ವಾಗತ ನೀಡಿದರು, ಮೂಗೂರು ಗ್ರಾಮದ ಮುಖ್ಯ ರಸ್ತೆಯ ಮೂಲಕ ದೇವಾಲಯಕ್ಕೆ ಕರೆದೊಯ್ಯುವ ಮಾರ್ಗ ಉದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಕಂಗೊಳಿಸುತ್ತಿದ್ದವು. ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮದ ಕೆಂಪಚಾರಿ ಮನೆತನದವರು ಪಟಾಕಿಸಿ ಸೇವಾರ್ಥದಾರರಾಗಿ ಸೇವೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಿದರು. ಅರ್ಚಕ ಮನೆತನದವರು ಕಂಕಣಧಾರಿ ಅರ್ಚಕರಿಗೆ ದೇಗುಲದ ಬಳಿ ಪಾದಪೂಜೆ ನೆರವೇರಿಸಿ, ಸಂಭ್ರಮ ಸಡಗರದಿಂದ ಗ್ರಾಮದ ದೇವಾಲಯಕ್ಕೆ ಬರಮಾಡಿಕೊಂಡ ನಂತರ ಅಮ್ಮ ನವರಿಗೆ
ದೇವಾಲಯದಲ್ಲಿ ಮಹಾ ಮಂಗಳಾರತಿ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು, ಅರ್ಚಕರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Kshetra Samachara
05/01/2025 02:43 pm