ಮೈಸೂರು ಬಂದ್ ಹಿನ್ನೆಲೆ ಬಸ್ ತಡೆದು ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಬಸ್ ಸಂಚಾರಕ್ಕೆ ಅಡ್ಡ ಹಾಕಿದ್ದರು.
ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ಧರಣಿ ಕುಳಿತ ಪ್ರತಿಭಟನಾನಿರತರು, ಬಸ್‌ಗಳ ಓಡಾಟ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹಲವು ಭಾಗಗಳಿಗೆ ತೆರಳಲು ಪ್ರಯಾಣಿಕರು ಇದರಿಂದ ಪರದಾಡುವಂತಾಯಿತು. ನಗರ ವಿಭಾಗದಿಂದ ಬಸ್ ಇಲ್ಲದ ಕಾರಣ ಆಟೋಗಳಿಗೆ ಫುಲ್ ಡಿಮಾಂಡ್ ಉಂಟಾಗಿದ್ದು, ಒನ್ ಟು ಡಬಲ್ ರೇಟ್ ಕೇಳಿದರು.
PublicNext
07/01/2025 05:23 pm